ಶಿವಕುಮಾರ ಮಹಾಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆ ಆಚರಣೆ

ಲೋಕದರ್ಶನ ವರದಿ

ಶಿರಹಟ್ಟಿ 22: ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಹಿಂದೂ ಮುಸಲ್ಮಾನ ಹಿರಿಯರು ಹಾಗೂ ಯುವಕರೆಲ್ಲ ಜಾತಿ ಬೇಧ ಮರೆತು ಕರ್ನಾಟಕ ರತ್ನ, ತ್ರಿವಿಧ ದಾಸೋಹಿ ಹಾಗೂ ಶತಾಯುಶಿ ಶ್ರೀ ಸಿದ್ಧಗಂಗಾ ಶಿವಕುಮಾರ ಮಹಾಸ್ವಾಮಿಗಳ ಪ್ರಥಮ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 ರಾಮಲಿಂಗೇಶ್ವರ ಮಠದ ಬಸವರಾಜ ಶ್ರೀಗಳು ಮತ್ತು ಬನ್ನಿಕೊಪ್ಪದ ಸುಜ್ಞಾನದೇವ ಮಹಾಸ್ವಾಮಿಗಳು ಮಾತನಾಡಿ, ಶಿವಕುಮಾರ ಮಹಾಸ್ವಾಮಿಗಳು ಇಡೀ ವಿಶ್ವಕ್ಕೇ ಮಾದರಿಯಾಗಿದ್ದಾರೆ, ಅವರ ಎಲ್ಲ ಆದರ್ಶಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಸಹಾಯ ಮಾಡುವಂತಹ ಕೆಲಸವನ್ನು ನಾವೆಲ್ಲರೂ ಮಾಡಿದಾಗ ಮಾತ್ರ ಅವರ ಆತ್ಮಕ್ಕೆ ಹಾಗೂ ಈ ಪುಣ್ಯಸ್ಮರಣೆಗೆ ಒಂದು ಬೆಲೆ ಬಂದಂತಾಗುತ್ತದೆ ಎಂದು ಹೇಳಿದರು. 

ಈ ಸಂಧರ್ಭದಲ್ಲಿ ಮಹೇಶ ಮಹಾದೇವಪ್ಪನವರ, ರಾಘವೇಂದ್ರ ಬಮ್ಮನ್ಹಳ್ಳಿ, ಆನಂದ ಹಿರೆಹೊಳಿ, ಅರುಣ ಗಡ್ಡಿ, ಶಿದ್ರಾಮಪ್ಪ ಮೊರಬದ, ಶಂಭು ಹಿರೇಹೊಳಿ, ಶರಣು ಹಿರೇಹೋಳಿ, ಫಕ್ಕೀರೇಶ ಕೋರಿ, ರವಿ ಸಜ್ಜನರ, ಶರತ್ ಸಜ್ಜನರ, ವೀರೇಶ ಕುರವತ್ತಿ, ಮಲ್ಲಿಕಾಜರ್ುನ ಕರಿಗಾರ, ಬಾಬುಸಾಬ್ ಒಂಟಿ, ವಿಜಯ್ ಗಾಂಜಿ, ಚಂದ್ರು ಅಕ್ಕೂರ, ದೇವಚಂದ ಜೈನ, ಮಹೇಶ ನಿರ್ವಾ ಣಿಶೆಟ್ರ, ಜನಾರ್ದಣ ಶೇಷನಗೌಡ್ರ, ರಮೇಶ್ ಬೆಟಗೇರಿ, ವಿಜಯ್ ಸಜ್ಜನ, ರಫೀಕ್ ಶಿರಹಟ್ಟಿ, ವಿರೇಶ್ ಹುಬ್ಬಳ್ಳಿ, ಹನಮಂತ ಕೊಕ್ಕರಗುಂದಿ, ಅನಿಲ್ ಮಲ್ಲನಗೌಡ್ರ, ಅನಿಲ್ ಮಲ್ಲನಗೌಡ್ರ, ಬಸಣ್ಣ ಗೋಡಿ, ಮಂಜು ಹೊನಕೇರಿ, ಬಸವರಾಜ ಬಾರಕೇರ, ಜಯಪ್ಪ ಹುಬ್ಬಳ್ಳಿ, ಮಲ್ಲೇಶ ಕಿತ್ತೂರು ಹಾಗೂ ಅನೇಕರು ಉಪಸ್ಥಿತರಿದ್ದರು.