ಸಂಭ್ರಮದಿಂದ ಸಂವಿಧಾನ ದಿನಾಚರಣೆ

ಮಧುರವಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಸಂವಿಧಾನ ದಿನಾಚರಣೆ

ಸಂಬರಗಿ 26: ಗಡಿ ಭಾಗದ ಹಲವು ಗ್ರಾಮಗಳಲ್ಲಿ ಸಂಭ್ರಮದಿಂದ ಸಂವಿಧಾನ ದಿನಾಚರಣೆ ಆಚರಿಸಲಾಗಿದ್ದು, ಮಧಬಾವಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರವನ್ನು ಗ್ರಾ.ಪಂ.ಅಧ್ಯಕ್ಷ ಮಹಾದೇವ ಕೋರೆ ಪೂಜೆ ನೆರವೇರಿಸಿ ಮಾತನಾಡಿದರು.                

ಈ ವೇಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಳು ಮಗದುಮ್, ಗ್ರಾಮ ಪಂಚಾಯತ್ ಸದಸ್ಯ ಸಂಜೆಯ ಅದಾಟೆ, ಕೃಷ್ಣ ಶಿಂದೆ, ಮಾಂತೇಶ್ ಕಾಂಬಳೆ, ಜ್ಞಾನೇಶ್ವರ್ ಭಂಡಾರಿ, ಗೋಪಾಲ್ ನೀವಲಗಿ, ಅಶೋಕ್ ಗಾಡಿವಡ್ಡರ್, ಸದು ಗಸ್ತಿ, ಸ್ವಾಗತ ಭಾಷಣ ಪಿಡಿಓ ಸಂತೋಷ್ ಸನದಿ, ವಂದನಾರೆ​‍್ಣ ಕಾರ್ಯದರ್ಶಿ ಉಸ್ಮಾನ್ ಮುಲ್ಲಾ ಇವ್ರು ನಡೆಸಿದರು. 

ಸಂಬರಗಿ ಗ್ರಾಮ ಪಂಚಾಯತ್ ಕಾರ್ಯದಲ್ಲಿ ಸಂವಿಧಾನ ದಿನಾಚರಣೆ ನಿಮಿತ್ಯವಾಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮೀನಾಕ್ಷಿ ಮಲ್ಲಿಕಾರ್ಜುನ್ ದಳವಾಯಿ, ಇವರ ಹಾಸ್ತದಿಂದ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ಭಾವಚಿತ್ರ ಪೂಜೆ ನಿರ್ವಹಿಸಿ ಮಾತನಾಡಿದರು. 

ಈ ವೇಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಅಶೋಕ್ ಬಾಬು ಮನೆ, ಗ್ರಾಮ ಪಂಚಾಯತ್ ಸದಸ್ಯರಾದ, ಅಮೃತ್ ಮಿಸಾಳ  ಪಿಕೆಪಿಎಸ್ ಉಪಾಧ್ಯಕ್ಷರಾದ ಅನ್ನಸಾಬ್ ಮಿಸಾಳ, ಪಾಂಡು ಕಾಂಬಳೆ, ರಾಘು ಹೊಸಮನಿ ಗ್ರಾಮ ಪಂಚಾಯತ್ ಸದಸ್ಯರು ಎಲ್ಲ ಗಣ್ಯರು ಉಪಸ್ಥಿತಿ ಇದ್ದರೂ ಪಿಡಿಒ ದರ​‍್ಪ ತಗಲಿ ಸ್ವಾಗತಿಸಿ  ವಂದಿಸಿದರು. 

ಜಂಬಗಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಸಂವಿಧಾನ ದಿನಾಚರಣೆ ಆಚರಿಸಲಾಯಿತು. ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ವಾಗರಮಾರೆ  ಡಾಕ್ಟರ್ ಬಾಬಾಸಾಹೇ    ಅಂಬೇಡ್ಕರ್ ಭಾವಚಿತ್ರಪೂಜೆ ನಿರ್ವಹಿಸಿ ಮಾತನಾಡಿದರು. 

ಈ ವೇಳೆ ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಕೆಂಪಾಡೆ, ಯಶವಂತ್ ಪಾಟೀಲ್, ಪ್ರಕಾಶ್ ಜಾದವ್ ,ರಾಜೇಂದ್ರ ಪಾಟೀಲ್, ಬಸಪ್ಪ ಮಾಳಿ, ಪಿಡಿಒ ಸೋಮು ರಾಠೋಡ್ ಸ್ವಾಗತ ಮಾಡಿದರು, ಪ್ರಶಾಂತ ವಾಗ್ಮರೆ ವಂದಿಸಿದರು ಇನ್ನಿತರು ಉಪಸ್ಥಿತಿ ಇದ್ದರು