ಸ್ಕೌಟ್ ಸಂಸ್ಥಾಪಕ ಬೆಡನ್ ಪೋವೆಲರ ಜನ್ಮದಿನಾಚರಣೆ
ಕಾಗವಾಡ 25: ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸ್ಕೌಟ್ ಮತ್ತು ಗೈಡ್ ಮತ್ತು ಸ್ಥಳೀಯ ಸಂಸ್ಥೆ ಕಾಗವಾಡ ಇವರ ಸಹಯೋಗದಲ್ಲಿ ಸ್ಕೌಟ್ ಸಂಸ್ಥಾಪಕರಾದ ಬೆಡನ್ ಪೋವೆಲ್ ಅವರ 169 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಇದರ ಅಂಗವಾಗಿ ಸ್ಕೌಟ ಮತ್ತು ಗೈಡ್ ಮಕ್ಕಳ ಮೇಳವನ್ನು ಕೂಡ ಆಯೋಜಿಸಲಾಗಿತ್ತು. ಸ್ಕೌಟ್ ಮತ್ತು ಗೈಡ್‌ನ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಮಕ್ಕಳ ಮೇಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಆರ್ ಮುಂಜೆ, ಎಂ.ವಿ.ಇನಾಮದಾರ, ಎಸ್ ಐ ಹಳಿಗೌಡರ, ಸಹಾಯಕ ರಾಜ್ಯ ಸಂಘಟನಾ ಆಯುಕ್ತರು(ಸ್ಕೌಟ್) ಡಿ.ಬಿ.ಅತ್ತಾರ, ಜಿಲ್ಲಾ ಸಂಘಟನಾ ಶಿಕ್ಷಕರಾದ ಎನ್ ಜಿ ಪಾಟೀಲ್, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಎಂ.ಕೆ.ಕಾಂಬಳೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಜಿಲ್ಲಾ ಸಂಘಟನಾ ಶಿಕ್ಷಕ ಮಾತನಾಡಿ ಎನ್ ಜಿ ಪಾಟೀಲ್, ಮಕ್ಕಳಿಗೆ ಸ್ಕೌಟ್ ಮತ್ತು ಗೈಡ್ ನಿಂದ ದೇಶ ಪ್ರೇಮದ ಜೊತೆ ದೇಶಕ್ಕೆ ನೀಡಬೇಕಾದ ಗೌರವದ ಬಗ್ಗೆ ವಿವರವಾಗಿ ಹೇಳಿದರು. ನಂತರ ಬಿಇಒ ಎಂ ಆರ್ ಮುಂಜೆ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವದು ಅವಶ್ಯಕವಾಗಿದೆ. ಇದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವೂ ಆಗಬೇಕೆಂದರು. ಆರ್ ಬಿ ಲಂಗೋಟೆ, ಪ್ರಕಾಶ ಕುಂಬಾರ, ನೇತಾಜಿ ತಳವಾರ, ಪಿ ಎ ಪನದೆ, ಅರುಣ ಮುಜಾವರ, ರವಿ ಗಾಣಿಗೇರ, ಮೆಡಂ ಹುಡೇದ, ಎಮ್ ಆರ್ ಮಟಾಲೆ, ಕಲ್ಲೊಳೆ, ವಾಘಮೋಡೆ, ಸಿ ಎಂ.ಸಂತೋಷ, ಎ ಎಸ್ ಪೂಜಾರಿ, ಮಮದಾಪೂರ ಮೆಡಂ, ಸುನಂದಾ ನಾಯಕ, ಪ್ರವೀಣ ಕಲ್ಲೋಳಿ, ಎ ಆರ್ ಕಾಂಬಳೆ, ಗಣೇಶ ಹೊನಕಾಂಬಳೆ, ಶಿವಶಾಂತ ಜಿರಗ್ಯಾಳೆ ಸೇರಿದಂತೆ ಅನೇಕರು ಇದ್ದರು