ಸಿಂದಗಿ 23: ಪಪಂ ಜಾತಿಪ್ರಮಾಣ ಪತ್ರದ ಗೊಂದಲದ ಹಿನ್ನಲೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಮರೆತ ಕೊಲಿ, ಕಬ್ಬಲಿಗ, ತಳವಾರ, ವಾಲಿಕಾರ, ನಾಟೀಕಾರ ಸಮೂದಾಯಗಳು ತಾಲೂಕಾಡಳಿತಕ್ಕೆ ಸಿಮೀತವಾಯಿತೆ ಜಯಂತಿ ಆಚರಣೆ.
ಪಟ್ಟಣದಲ್ಲಿರುವ ಅಂಬಿಗರ ಚೌಡಯ್ಯನ ವೃತ್ತದಲ್ಲಿನ ಮೂರ್ತಿಗೆ ಗೌರವ ಸಲ್ಲಿಸಿದ ಬಳಿಕ, ತಾಲೂಕು ಆಡಳಿತ ಕಚೇರಿಯಲ್ಲಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹಾಗೂ ವಿವಿಧ ಸಮಾಜದ ಮುಖಂಡರ ನೇತೃತ್ವದಲ್ಲಿ ಫೋಟೋ ಪೂಜೆ ನೆರವೇರಿಸುವ ಮೂಲಕ ಜಯಂತಿ ಆಚರಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವೈ.ಸಿ ಮಯೂರ ಮಾತನಾಡಿ, ಸಮಾಜದ ಎಲ್ಲ ರಂಗಗಳಲ್ಲಿ ಸಾಮಾಜಿಕ ಅಸಮಾನತೆಯನ್ನು ಕಾಣುತ್ತಿರುವ ವ್ಯವಸ್ಥೆಯಲ್ಲಿ 12ನೇ ಶತಮಾನದಲ್ಲಿ ಗನಘೋರವಾದ ಅಸಮಾನತೆಯನ್ನು ತೊಳೆಯಲು ಸಮಾಜದ ಅಂಕುಡೊಂಕುಗಳನ್ನು ಓರೆ ಕೋರೆಗಳನ್ನು ಅಳಿಸಿಹಾಕಲು ಅಗ್ರಗಣ್ಯ ಶರಣರಾದ ಅಂಬಿಗರ ಚೌಡಯ್ಯನವರು ಒಬ್ಬರು. ಅಣ್ಣ ಬಸವಣ್ಣನವರಿಂದ ನಿಜ ಶರಣರೆಂದು ಕರೆಸಿಕೊಂಡವರು. ಮೌಢ್ಯದ ವಿರುದ್ಧ ತೀಕ್ಷಣವಾಗಿ ವಚನಗಳನ್ನು ಬರೆದವರು. ತಮ್ಮ ಹೆಸರನ್ನೇ ಅಂಕಿತನಾಮವಾಗಿ ಇಟ್ಟುಕೊಳ್ಳುವ ಮೂಲಕ ಬಂಡಾಯದ ಕಹಳೆ ಉದಿದ್ದಾರೆ. ಇಂತಹ ಮಹನೀಯರ ಜಯಂತಿಯನ್ನು ಒಂದು ಜಾತಿಗೆ ಸಿಮಿತಗೊಳೀಸದೇ ಸಾರ್ವತ್ರಿಕವಾಗಿ ಆಚರಿಸುವಂತಾಗಬೇಕು ಎಂದರು.
ಗ್ರೇಡ್-2 ತಹಶೀಲ್ದಾರ್ ಇಂದಿರಾಬಾಯಿ ಬಳಗಾನೂರ ಮಾತನಾಡಿ, 12 ನೇ ಶತಮಾನದಲ್ಲಿ ಬಸವ ಕಲ್ಯಾಣದ ಅನುಭವ ಮಂಟಪದ ಸದಸ್ಯರಾಗಿದ್ದ ನಿಜಶರಣ ಅಂಬಿಗರ ಚೌಡಯ್ಯನವರು
ಸಮಾಜದಲ್ಲಿನ ಮೌಢ್ಯತೆ ತೊಳೆದು ಹಾಕುವಲ್ಲಿ ವಚನಗಳನ್ನು ಬರೆದು ಚಾಟಿ ಬಿಸಿದ್ದಾರೆ ಅವರ ವಚನಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡು ಅನುಕರಣೆಯಲ್ಲಿ ತರಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಸಾಮಜದ ಮುಖಂಡ ರಾಜು ನರಗೋದಿ, ವಕೀಲರು ಹಾಗೂ ಸಮಾಜದ ಮುಖಂಡರಾದ ಮಲ್ಲು ಘತ್ತರಗಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ ಮಾತನಾಡಿ, ಶರಣರನ್ನು ಒಂದು ಜಾತಿಗೆ ಸೀಮಿತ ಮಾಡದೆ ಸಮ ಸಮಾಜಕ್ಕೆ ಹೋರಾಡಿದ ಎಲ್ಲರ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣ ಎಂದರು.
ಈ ವೇಳೆ ಹೆಮರಡ್ಡಿ ಮಲ್ಲಮ್ಮ ಸಮಾಜದ ಮುಖಂಡ ಚಂದ್ರಶೇಖರ ದೇವರೆಡ್ಡಿ, ನಿವೃತ್ತ ಪ್ರಾಚಾರ್ಯ ಬಿ.ಎಂ ಬಿರಾದಾರ, ನಾಗೇಶ ತಳವಾರ, ಕಂದಾಯ ನೀರೀಕ್ಷಕ ಐ.ಎ ಮಕಾಂದಾರ, ತಾಲೂಕು ಆಡಳಿತ ಸಿಬ್ಬಂದಿಯಾದ ಸಂತೋಷ ವಾಲೀಕಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕೆಇಬಿ ಗುತ್ತಿಗೆದಾರ ಬೋಗೇಶ ನರಗೋದಿ ಅವರು ಸ್ವಾಗತಿಸಿದರು. ಬಸವರಾಜ ಸೋಂಪುರ ನಿರೂಪಿಸಿದರು. ಗಂಗಾಧರ ಸೋಮನಾಯ್ಕ ವಂದಿಸಿದರು.