ಮೊಹರಂ ಹಬ್ಬವನ್ನು ಶಾಂತ ರೀತಿಯಲ್ಲಿ ಆಚರಿಸಿ: ಡಿಎಸ್‌ಪಿ ಜಮೀರ
Celebrate Muharram in a calm manner: DSP Jameer
ಜಮಖಂಡಿ 02: ಮೊಹರಮ್ ಇದೊಂದು ಹೊಸ ವರ್ಷದ ಹಬ್ಬವಾಗಿದೆ. ಕಳೆದ 6 ದಶಕದಿಂದ ಹಬ್ಬವನ್ನು ಜಾತಿ, ಮತ, ಧರ್ಮ ಭೇಧ-ಭಾವ ಮರೆತು ದೇಶದಲ್ಲಿ ಎಲ್ಲರೂ ಆಚರಣೆ ಮಾಡುತ್ತಾರೆ ಎಂದು ಡಿಎಸ್‌ಪಿ, ರೋಷನ್ ಜಮೀರ ಹೇಳಿದರು.
ನಗರದ ಶಹರ ಪೋಲಿಸ್ ಠಾಣೆಯಲ್ಲಿ ನಡೆದ ಮೊಹರಮ್ ಹಬ್ಬದ ಹಿಂದು, ಮುಸ್ಲಿಂ ಸಮಾಜದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಎಲ್ಲರು ದೇವರನ್ನು ಸ್ಮರಿಸುತ್ತಾ ಬಂದಿರುವ ದೇಶ. ಸಂತರು, ಸೂಪಿಸಂತರು ತಾವುಗಳು ನಡೆದುಕೊಂಡು ಬಂದ ದಾರಿಯನ್ನು ತೋರಿಸಿದ್ದಾರೆ. ಅವರ ಮಾರ್ಗದಲ್ಲಿ ಹಬ್ಬಗಳನ್ನು ಆಚರಿಸುತ್ತಾ ಬಂದಿರುತ್ತೇವೆ ಎಂದರು.
ಮೊಹರಮ್ ಹಬ್ಬದ ದಿನದಂದು ಅಗ್ನಿಯಲ್ಲಿ ಹಾಯುವ ಸಮಯದಲ್ಲಿ ಯಾರು ಅದನ್ನು ತೂರುವ ಕೆಲಸ ಮಾಡಬಾರದು. ಅದರಿಂದ ಮಕ್ಕಳಿಗೆ, ಮಹಿಳೆಯರಿಗೆ ಯುವಕರಿಗೆ, ವಯೋವೃದ್ಧರಿಗೆ ತೊಂದರೆಯಾಗುತ್ತದೆ. ಎಲ್ಲರೂ ಶಾಂತ ರೀತಿಯಲ್ಲಿ ಹಬ್ಬವನ್ನು ಆಚರಣೆ ಮಾಡಿಕೊಳ್ಳಬೇಕು. ಮೆರವಣಿೆಗೆ ಸಮಯದಲ್ಲಿ ರಸ್ತೆಯಲ್ಲಿ ಇರುವ ಪಾದಚಾರಿಗಳಿಗೆ ತೊಂದರೆಯಾಗದ ಹಾಗೆ ನೋಡಿಕೊಳ್ಳಬೇಕು. ನಿಮಗಾಗಿ ಪೋಲಿಸ್ ಬಂದು ಬಸ್ತ್ ಏರಿ್ಡಸಲಾಗುತ್ತದೆ. ಮಹಿಳೆಯರ ಮೇಲೆ ಅಸಭ್ಯ ವರ್ತನೆ ಮಾಡಿದರೆ ಅಂತಹವರ ಮೇಲೆ ಕಾನೂನು ಕ್ರಮವನ್ನು ಜರುಗಿಸಬೇಕಾಗುತ್ತದೆ. ಇದೊಂದು ಭಾವಕೈತೆಯ ಹಬ್ಬವಾಗಿದೆ. ಶೇ.80ರಷ್ಟು ಜನ ಹಿಂದುಗಳು ಆಚರಣೆ ಮಾಡುತ್ತಾರೆ. ಶೇ.20 ಮುಸ್ಲಿಂ ಸಮಾಜದವರು ಇರುತ್ತಾರೆ. ಯಾರಿಗೂ ತೊಂದರೆ ಆಗದ ಹಾಗೆ ಹಬ್ಬಗಳನ್ನು ಆಚರಣೆ ಮಾಡಬೇಕು. ನಿಮಗಾಗಿ ನಮ್ಮ ಪೋಲಿಸ್ ಇಲಾಖೆ 24 ತಾಸು ಕಾರ್ಯನಿರ್ವಹಿಸುತ್ತದೆ ಎಂದರು.
ಶಹರ ಪೋಲಿಸ್ ಠಾಣೆಯ ಪಿಎಸ್‌ಐ. ಅನೀಲ ಕುಂಬಾರ, ಕ್ರೈಂ ಪಿಎಸ್‌ಐ, ನಾಗರಾಜ ಕಾಜಗಾರ ವೇದಿಕೆಯಲ್ಲಿ ಇದ್ದರು.
ಪ್ರದೀಪ ಮೆಟ್ಟಗುಡ್ಡ ಮಾತನಾಡಿದರು. ಹಿಂದು ಸಮಾಜದ ಮುಖಂಡರು ಹಾಗೂ ಮುಸ್ಲಿಂ ಸಮಾಜದ ಮುಖಂಡರು ಸಭೆಯಲ್ಲಿ ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 