ತಡವಲಗಾದಲ್ಲಿ ಅದ್ದೂರಿಯಾಗಿ ಮೊಹರಂ ಆಚರಣೆ
Celebrate Moharram in grand style at Tadawalaga
ಇಂಡಿ 07: ತಾಲೂಕಿನ ತಡವಲಗಾ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಕೂಡಾ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.ತ್ಯಾಗ, ಬಲಿದಾನ, ಭಾವೈಕ್ಯತೆ, ಸಾಮರಸ್ಯದ ಪ್ರತೀಕವಾಗಿರುವ ಮೊಹರಂ ಹಬ್ಬವನ್ನು ಸೋಮವಾರ ಹಿಂದೂ-ಮುಸ್ಲಿಂ ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಮೊಹರಂ ಮುಸ್ಲಿಂ ಧರ್ಮೀಯರಿಗೆ ಅತ್ಯಂತ ವಿಶೇಷವಾದ ಹಾಗೂ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ಯಾಕೆಂದರೆ, ಮೊಹರಂ ಹಬ್ಬವು ಮುಸ್ಲಿಂ ಸಮುದಾಯದವರಿಗೆ ಹೊಸ ವರ್ಷದ ಆರಂಭವಾಗಿದೆ. ಇದು ಅವರಿಗೆ ಹೊಸ ಹಿಜ್ರಿ ವರ್ಷದ ಆರಂಭ. ಇಸ್ಲಾಂನಲ್ಲಿ ನಾಲ್ಕು ಪವಿತ್ರ ತಿಂಗಳುಗಳಲ್ಲಿ ಒಂದಾಗಿ ಆಚರಿಸಲಾಗುವ ಮೊಹರಂ ಆಳವಾದ ಆಧ್ಯಾತ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿದ ದಿನವಾಗಿದೆ. ವಿಶೇಷವಾಗಿ ಶಿಯಾ ಮುಸ್ಲಿಂ ಸಮುದಾಯಕ್ಕೆ ಇದು ತುಂಬಾನೆ ವಿಶೇಷ ದಿನವಾಗಿದೆ ಎಂದರೂ ತಪ್ಪಾಗಲಾರದು. ಅದರಂತೆ ತಡವಲಗಾ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಎಂಬ ಬೇದ ಬಾವವಿಲ್ಲದೆ, ತಡವಲಗಾ ಗ್ರಾಮದಲ್ಲಿ ನಾಲ್ಕು ಕಡೆಗಳಲ್ಲಿ ದೇವರ ಪ್ರತಿಷ್ಠಾಪನೆ ಮಾಡುತ್ತಾರೆ.ಹಾಗೂ ಎಲ್ಲ ಪೂಜೆ ಪುನಸ್ಕಾರಗಳು ಕೂಡಾ ಹಿಂದೂಗಳೇ ಮಾಡುತ್ತಾರೆ.ಮೊದಲ ದಿನ ಗ್ರಾಮದ ಎಲ್ಲಾ ಸಮಾಜದ ಜನರು ದೇವರಿಗೆ ನೈವೇದ್ಯವನ್ನು ಕೊಡುತ್ತಾರೆ.ಮಾರನೇ ದಿನ ಹೆಜ್ಜೆ ಮೇಳ ಆಡುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗ್ರಾಮದ ಹೊರವಲಯಲ್ಲಿ ಇರುವ ಊರ ಹಳ್ಳದ ದಂಡೆಗೆ ಒಯ್ಯುತ್ತಾರೆ.
ವಿಶೇಷ ಪೂಜೆ ಸಲ್ಲಿಸಿದ ನಂತರ ವರ್ಷದ ಆಗು ಹೋಗುವ ಮಳೆ ಬೆಳೆ ರಾಜಕೀಯ ವಿದ್ಯಮಾನಗಳ ಬಗ್ಗೆ ಹೇಳಿಕೆ ನಡಿಯುತ್ತವೆ. ನಂತರ ಆ ಡೊಲಿಗಳನ್ನು ಎಲ್ಲರೂ ಸೇರಿ ಮೂಲ ಸ್ಥಳಕ್ಕೆ ತರುತ್ತಾರೆ ಇದು ಆದಿ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ಗುರುಲಿಂಗಪ್ಪ ಸಾತಲಿಂಗಪ್ಪ ಇಂಡಿ ಅವರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 