ಜಾತಿ ಗಣತಿ: ಅ.ಭಾ.ವೀರಶೈವ ಮಹಾಸಭೆಯ ಘೋಷಣೆಗೆ ಶ್ಲಾಘನೆ
Caste Census: Praise for the announcement of the A.B.A. Veerashaiva Mahasabha
ಸಿಂದಗಿ 21: ದಿ. 22ರಂದು ಜರುಗಲಿರುವ ಜಾತಿ ಗಣತಿಯಲ್ಲಿ ಕರ್ನಾಟಕದ ಅಖಂಡ ವೀರಶೈವ ಲಿಂಗಾಯತ ಸಮಾಜವು ಧರ್ಮ ಹಾಗೂ ಜಾತಿ, ಉಪಜಾತಿ ವಿವರಗಳನ್ನು ನಮೂದಿಸಲು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯು ಕೆಲವು ನಿರ್ಣಯಗಳನ್ನು ನಿರ್ಣಯಿಸಿದೆ ಎಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ, ಬೆಂಗಳೂರು ಅಧ್ಯಕ್ಷ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ತಿಳಿಸಿದರು.
ಅವರು ಪಟ್ಟಣದ ಸಾರಂಗಮಠದಲ್ಲಿ ಶನಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ದಾವಣಗೆರೆಯಲ್ಲಿ ಇತ್ತೀಚಿಗೆ ನಡೆದ ಐತಿಹಾಸಿಕ ಸಭೆಯಲ್ಲಿ ವೀರಶೈವ ಲಿಂಗಾಯತ ಹಿಂದೆ ಇಂದು ಮತ್ತು ಮುಂದೆ ಎಂದೆಂದೂ ಒಂದೇ ಎಂಬ ಅಖಿಲ ಭಾರತ ವೀರಶೈವ ಮಹಾಸಭೆಯ ಘೋಷಣೆಯನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತದೆ. ಅದೇ ರೀತಿ ಧರ್ಮದ ಕಾಲಂನಲ್ಲಿ ಎನನ್ನು ನಮೂದಿಸಬೇಕು ಎಂಬುವದನ್ನು ಅವರವರ ವಿವೇಚನೆಗೆ ಮುಕ್ತವಾಗಿರಿಸಿದ ಹುಬ್ಬಳ್ಳಿಯ 19-09-2025 ರ ಏಕತಾ ಸಮಾವೇಶದ ನಿರ್ಣಯವನ್ನು ಶ್ಲಾಘಿಸುತ್ತದೆ.
ಈ ಎರಡೂ ಸಮಾವೇಶಗಳ ನಿರ್ಣಯಗಳ ಆಧಾರದಲ್ಲಿ ಸಂಸ್ಥೆಯು ಕಾನೂನು ಪರಿಣಿತರ ಅಭಿಪ್ರಾಯ ಪಡೆಯಲಾಗಿ, ಹಿಂದೂ ಧರ್ಮದಲ್ಲಿ ಮಾತ್ರ ಲಭ್ಯವಿರುವ ಕಾನೂನಿನಂತೆ ಜಾತಿ-ಉಪಜಾತಿ ಆಧಾರಿತ ಮೀಸಲಾತಿ ಸೌಲಭ್ಯಗಳು ಇಗಾಗಲೇ ಹಲವು ವೀರಶೈವ ಲಿಂಗಾಯತ ಉಪ ಪಂಗಡಗಳಿಗೆ ಲಭಿಸುತ್ತಿದ್ದು ಅವುಗಳಿಂದ ಯಾವ ಉಪ ಪಂಗಡವೂ ವಂಚಿತವಾಗಬಾರದೆಂದಲ್ಲಿ, ಧರ್ಮದ ಕಾಲಂ 8 ರಲ್ಲಿ ಹಿಂದೂ ಎಂತಲೂ ಜಾತಿಯ ಕಾಲಂ 9 ರಲ್ಲಿ ವೀರಶೈವ ಲಿಂಗಾಯತ (ಎ-1524) ಎಂತಲೂ ಮತ್ತು ಉಪ ಜಾತಿ ಕಾಲಂ 10 ರಲ್ಲಿ ಅವರವರ ಉಪಪಂಗಡದ ವಿವರಗಳನ್ನು ನಮೂದಿಸಬೇಕೆಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯು ಕರ್ನಾಟಕ ರಾಜ್ಯದ ಅಖಂಡ ವೀರಶೈವ ಲಿಂಗಾಯತ ಸಮಾಜಕ್ಕೆ ಕರೆ ನೀಡುತ್ತದೆ.
ಸಮಾಜದ ಎಲ್ಲ ಬಂಧುಗಳು ಯಾವುದೇ ಗೊಂದಲಗಳಿಂದ ಪ್ರಭಾವಿತರಾಗದೆ ಮೇಲೆ ಹೇಳಿದ ರೀತಿ ಧರ್ಮ-ಹಿಂದೂ, ಜಾತಿ-ವೀರಶೈವ ಲಿಂಗಾಯತ ಮತ್ತು ಅವರವರ ಉಪಜಾತಿಗಳನ್ನು ನಮೂದಿಸಿ ಇಡೀ ಸಮಾಜದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಭವಿಷ್ಯಕ್ಕೆ ಸುಭದ್ರ ತಳಹದಿ ನಿರ್ಮಾಣವಾಗಬೇಕೆಂದು ಕರೆ ಕೊಡುತ್ತದೆ ಎಂದು ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಶ್ರೀಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕಾಧ್ಯಕ್ಷ ಅಶೋಕ ವಾರದ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 