ಮನೆಯ ಕಿಟಕಿ ಮುರಿದು ನಗದು,ಚಿನ್ನಾಭರಣ ಕಳ್ಳತನ
Cash, jewellery stolen after house window broken
ಹೂವಿನಹಡಗಲಿ 21 : ದರೋಡೆಕೊರರು ಮನೆಯ ಹಿಂಭಾಗಲದ ಕಿಟಕಿ ಮುರಿದು ನಗದು, ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಪಟ್ಟಣದ ಸೋಗಿ ರಸ್ತೆಯ 9ನೇ ವಾರ್ಡ್ ನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ. ಪಟ್ಟಣದ ಓಷಧಿ ಮಾರಾಟಗಾರ ಪ್ರತಿನಿಧಿ ಅಜಮಾತುಲ್ಲಾ ಎಂಬುವವರು ಮನೆ ಬೀಗ ಹಾಕಿಕೊಂಡು ಪಟ್ಟಣದ ಸಹೋದರಿ ಮನೆಗೆ ಹೋಗಿದ್ದ ವೇಳೆ ರಾತ್ರಿ ಕಳ್ಳರು ಮನೆಯ ಹಿಂಭಾಗದ ಕಿಟಕಿಯ 4 ಕಬ್ಬಿಣ ಸರಳನ್ನು ಕೊರೆದು ಮನೆ ಒಳಗಡೆ ಹೋಗಿ ಕಳ್ಳತನ ಮಾಡಿದ್ದಾರೆ. ಮನೆಯಲ್ಲಿದ್ದ 15 ತೊಲೆ ಬಂಗಾರ, ಜತೆಗೆ ಬೆಳ್ಳಿ , ? 65 ಸಾವಿರ ನಗದು ಹಣವನ್ನು ದೋಚಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ದೀಪಿಕ್ ಆರ್. ಭೂಸರೆಡ್ಡಿ, ಪಿಎಸ್ ಐ ಮಣಿಕಂಠ ಮತ್ತುಬೆರಳಚ್ಚು ತಜ್ಞರು, ಶ್ವಾನ ತಪಾಸಣಾ ದಳ ಭೇಟಿ ನೀಡಿ ತಪಾಸಣೆ ನಡೆಸಿದರು. ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 