ಹಿಂದುಳಿದ ವರ್ಗಗಳ ಸಮೀಕ್ಷಾ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ: ಡಿಸಿ

ಹಿಂದುಳಿದ ವರ್ಗಗಳ ಸಮೀಕ್ಷಾ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ: ಡಿಸಿ Carry out the survey work of backward classes neatly: DC

ಕೊಪ್ಪಳ 03: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದಕರ್ನಾಟಕರಾಜ್ಯ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥತಿಗತಿಗಳ ಬಗ್ಗೆ ಕೈಗೊಳ್ಳಲಿರುವ ಈ ಸಮೀಕ್ಷಾಕಾರ್ಯವನ್ನು ಕೊಪ್ಪಳ ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದುಜಿಲ್ಲಾಧಿಕಾರಿಡಾ. ಸುರೇಶ ಬಿ.ಇಟ್ನಾಳ ಹೇಳಿದರು. 

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿಕರ್ನಾಟಕರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದಕರ್ನಾಟಕರಾಜ್ಯ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಕೈಗೊಳ್ಳಲಿರುವ ಸಮೀಕ್ಷಾಕಾರ್ಯದಕುರಿತುಕರೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. 

ಈ ಸಮೀಕ್ಷೆಕಾರ್ಯವು ಕೊಪ್ಪಳ ಜಿಲ್ಲೆಯಲ್ಲಿ ಸೆಪ್ಟೆಂಬರ್ 20 ರಿಂದಅಕ್ಟೋಬರ್ 7 ರವರೆಗೆ ನಡೆಯಲಿದ್ದು, ಯಾವುದೇ ಸಮಸ್ಯೆಗಳಾಗದಂತೆ ನಡೆಸಬೇಕು.ಜಿಲ್ಲೆಯಆಯಾತಾಲ್ಲೂಕಿನ ತಹಶಿಲ್ದಾರರು ಸಮೀಕ್ಷೆಕಾರ್ಯಕ್ಕೆತಾಲ್ಲೂಕುಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರನ್ನು ಸರಿಯಾಗಿ ನೇಮಿಸಿದ್ದಾರೆ ಅಥವಾಇಲ್ಲಎಂಬುದನ್ನು ಪರೀಶೀಲನೆ ಮಾಡಬೇಕು. ಶಿಕ್ಷಕರು ವರ್ಗಾವಣೆಯಾದವರು.ಡೆಪಟೇಷನ್ ಮೇಲೆ ಬೇರೆಕಡೆ ಹೋದವರುಇರುತ್ತಾರೆ ಹಾಗಾಗಿ ಈ ಎಲ್ಲವುಗಳನ್ನು ಗಮನಿಸಿ ಗಣತಿದಾರರ ಸಮೀಕ್ಷಾ ಪಟ್ಟಿತೈಯಾರಿಸಬೇಕೆಂದರು. 

ಈ ಸಭೆಯಲ್ಲಿ ಅಪರಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೆಶಕರಾದ  ಮಂಜುನಾಥಗುಂಡೂರ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಅಧಿಕಾರಿ ನಾಗಮಣಿ ಹೊಸಮನಿ, ಜಿಲ್ಲಾದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುಧಾಕರ್ ಮಾನೆ, ಪದವಿಪೂರ್ವ ಶಿಕ್ಷಣ ಇಲಾಖೆಯಉಪನಿರ್ದೆಶಕರಾದಜಗದೀಶ್, ಜಿಲ್ಲಾಅಲ್ಪ ಸಂಖ್ಯಾತರಕಲ್ಯಾಣಅಧಿಕಾರಿಅಜ್ಮಿರ್ ಅಲಿ ಹಾಗೂ  ಜಿಲ್ಲೆಯ ವಿವಿಧತಾಲ್ಲೂಕಿನ ತಹಶಿಲ್ದಾರರು ಸೇರಿದಂತೆಇತರರು ಉಪಸ್ಥಿತರಿದ್ದರು.