ಮಾಸ್ಕೋ, ಡಿ 26 (ಸ್ಪುಟ್ನಿಕ್)-ಆಫ್ಘಾನಿಸ್ತಾನದ
ಉತ್ತರ ಭಾಗದ ಬಾಲ್ಕ್ ಪ್ರಾಂತ್ಯದಲ್ಲಿ ಸ್ಫೋಟಕಗಳನ್ನು ತುಂಬಿದ್ದ ಕಾರ್ ಸ್ಫೋಟಿಸಿ ಆರು ಭದ್ರತಾ ಸಿಬ್ಬಂದಿ
ಮೃತಪಟ್ಟಿದ್ದಾರೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ತಿಳಿಸಿದೆ. ಸಚಿವಲಾಯ ಹೇಳಿರುವಂತೆ ಸ್ಥಳೀಯ ಕಾಲಮಾನ
ಮುಂಜಾನೆ 4.30ಕ್ಕೆ ಈ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಇತರ ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಸ್ಫೋಟದ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆ ಹೊತ್ತಿಲ್ಲ. ಬಾಲ್ಕ್ ನಲ್ಲಿ ಮಂಗಳವಾರ ತಾಲಿಬನ್ ಉಗ್ರರು ತಪಾಸಣಾ ಕೇಂದ್ರದ ಮೇಲೆ ದಾಳಿ ನಡೆಸಿ
15 ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದರು.ಈ ಪ್ರಾಂತ್ಯದಲ್ಲಿ ತಾಲಿಬನ್ ಉಗ್ರರನ್ನು ಭದ್ರತಾ ಪಡೆಗಳು
ನಿಗ್ರಹಿಸಿದ್ದರೂ, ಮತ್ತೆ ಮತ್ತೆ ಉಗ್ರರು ಗುಂಪು ಸೇರಿ ದಾಳಿ ನಡೆಸುವುದನ್ನು ಮುಂದುವರೆಸಿದ್ದಾರೆ.ಆಫ್ಘಾನಿಸ್ತಾನದ
ದಕ್ಷಿಣ ಭಾಗದ ಕಂದಹಾರ್ ಪ್ರಾಂತ್ಯದಲ್ಲಿ ನಿನ್ನೆ ಭದ್ರತಾ ಪಡೆಗಳು ನಡೆಸಿದ ದಾಳಿಗಳಲ್ಲಿ 25 ಉಗ್ರರು
ಹತರಾಗಿದ್ದರು.