ಹೂಳು ತುಂಬಿಕೊಂಡ ಕಾಲುವೆ: ರೈತರ ಜಮೀನಿಗಳಿಗೆ ತಲುಪದ ನೀರು

ಹಾವೇರಿ೨೨: ತುಂಗಭದ್ರಾ ಮೇಲದ್ದಂಡೆ ನಾಲೆಯ ಉಪಕಾಲುವೆ ದುರಸ್ತಿ ಕಾಮಗಾರಿ ಮನಸೋ ಇಚ್ಚೆ ನಡೆಯುತ್ತಿದೆ ಎಂದು ರೈತರು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಕಳಪೆ ಕಾಮಗಾರಿ ಕಂಡು ಪ್ರತಿಭಟಿಸಲಾಗಿತ್ತು, ಆದರೂ ಗುತ್ತಿಗೆದಾರರು ಹಳೆ ಚಾಳಿ ಮುಂದುವರೆಸಿದ್ದಾರೆ ಎಂದು ದೂರಿದ್ದಾರೆ. ತಾಲೂಕಿನ ಹೊಸರಿತ್ತಿ ನೆಗಳೂರ ಮುಖ್ಯ ರಸ್ತೆಯಲ್ಲಿ ಹಾದು ಹೋಗಿರುವ ಉಪಕಾಲುವೆ ಬಹಳಷ್ಟು ಹಾಳಾಗಿದ್ದು, ಆರಂಭದಲ್ಲೆ ಬೇಲಿ ಬೆಳೆದು, ಕಾಲುವೆ ಅಲ್ಲಲ್ಲಿ ಸೀಳು ಒಡೆದಿದೆ. ಆದರೂ ಮಧ್ಯದಿಂದ ಕಾಲುವೆ ದುರಸ್ತಿಗೆ ಮುಂದಾಗಿದೆ. ರೈತರಲ್ಲಿ ಅನುಮಾನಕ್ಕೆಡೆ ಮಾಡಿದೆ. ಕೆಳ ಭಾಗದ ರೈತರ ಜಮೀನುಗಳಿಗೆ ಸರಾಗವಾಗಿ ನೀರು ಹರಿಸುವ ಉದ್ದೇಶದಿಂದ ದುರಸ್ತಿ ಕೆಲಸಕ್ಕೆ ಮುಂದಾಗಲಾಗಿದ್ದು, ಕಳಪೆ ಕಾಮಗಾರಿಯಿಂದಾಗಿ ರೈತರು ಪುನಃ ಆತಂಕಕ್ಕೊಳಗಾಗುವಂತೆ ಮಾಡಿದೆ. 

ಕಪ್ಪುಮಣ್ಣು: ಅಂದಾಜು ಪತ್ರಿಕೆಯಲ್ಲಿರುವಂತೆ ಗುಣಮಟ್ಟದ ಮರಂ ಬಳಸದೇ ಅಕ್ಕಪಕ್ಕದ ಕಪ್ಪುಮಣ್ಣು ಬಳಸಿ ಕೆಲಸ ನಡೆಸಿದ್ದಾರೆ. ಈ ಹಿಂದಿನ ಕಾಮಗಾರಿಗೆ ಬಳಸಿದ ಮರಂನ್ನೆ ಹಿಟಾಚಿ ಮೂಲಕ ಅಗೆಸಿ, ಮೇಲ್ನೋಟಕ್ಕೆ ಕಾಣುವಂತೆ ಮಾಡಿ ಅದರ ಮೇಲೆಯೇ ಕಾಂಕ್ರೀಟ್ ಹಾಕಲು ಯತ್ನಿಸಲಾಗುತ್ತಿದೆ. ತರಾತುರಿಯಲ್ಲಿ ಕೆಲಸ ಮುಗಿಸಲು ಹವಣಿಸಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಸಮೀಪದಲ್ಲೆ ಮರಂ ದೊರೆಯುತ್ತಿದ್ದರೂ ಕಪ್ಪುಮಣ್ಣು ಬಳಸಿ ನಾಲೆ ದುರಸ್ತಿಗೆ ಮುಂದಾಗಿರುವುದು ಯಾಕೆ ಎನ್ನುವುದು ರೈತರ ಪ್ರಶ್ನೆಯಾಗಿದೆ. 

ನಿಯಮ ಗಾಳಿಗೆ: ವಿತರಣಾ ನಾಲೆ ದುರಸ್ತಿಯಲ್ಲಿ ಗುಣಮಟ್ಟದ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸಿಮೆಂಟ್ ಕಾಂಕ್ರೀಟ್ ಬಳಕೆ, ಮರಂ, ಕ್ಯೂರಿಂಗ್ ಇನ್ನಿತರ ಕೆಲಸ ಕಾರ್ಯಗಳಲ್ಲಿ ಕಳಪೆ ಕಾಮಗಾರಿಯ ವಾಸನೆ ಎದ್ದು ಕಾಣುತ್ತದೆ. ಒಂದೆರಡು ತಿಂಗಳು ನಾಲೆಯಲ್ಲಿ ನೀರು ಹರಿದರೆ ಸಾಕು. ಅದರ ರಭಸಕ್ಕೆ ಬೇಗ ವಿತರಣಾ ನಾಲೆ ಹಾಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ನೆಗಳೂರ ಗ್ರಾಮದ ರೈತರೊಬ್ಬರು ಹೇಳಿದರು.  ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದರೂ ನೀರಾವರಿ ಇಲಾಖೆಯ ಅಧಿಕಾರಿಗಳು ಮಾತ್ರ ಇತ್ತ ಸುಳಿಯುತ್ತಿಲ್ಲ. ಕಾಮಗಾರಿ ಪರಿಶೀಲನೆಗೆ ಮುಂದಾಗದೇ ಇರುವುದನ್ನು ಗಮನಿಸಿದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿದ್ದಾರೆ ಎನ್ನುವುದು ಸಾಬೀತಾದಂತಾಗಿದೆ ಎಂದುಅವರುತಿಳಿಸಿದ್ದಾರೆ. 

ಕಾಳಜಿ ಇಲ್ಲ: ಪ್ರಗತಿಯಲ್ಲಿರುವ ವಿತರಣಾನಾಲಾಕಾಮಗಾರಿಯ ಗುಣಮಟ್ಟದ ಬಗ್ಗೆರೈತರು ಆಕ್ಷೇಪ ವ್ಯಕ್ತಪಡಿಸಿದರೆ,  ಗುತ್ತಿಗೆದಾರರವಿರುದ್ದಯಾವುದೇ ರೀತಿಯ ಕ್ರಮ ಜರುಗಿಸದಿರುವುದು. ಸ್ಥಳೀಯ ಜನಪ್ರತಿನಿಧಿಗಳ ಜಾಣ ಕುರುಡು ಪ್ರದರ್ಶನ ಎದ್ದು ಕಾಣುತ್ತದೆ ಎನ್ನುತ್ತಾರೆ ಸ್ಥಳೀಯ  ರೈತರು. 

ಇನ್ನು ನಾಲೆಯಲ್ಲಿ ಹೂಳು ತುಂಬಿಕೊಂಡಿದ್ದು ಅದನ್ನು ತೆಗೆದು ನೀರು ಸರಾಗವಾಗಿ ಹರಿಯಲು ಅನುಕೂಲ ಮಾಡಿ ಕೊಡಿ ಎಂದು ಗುತ್ತಿಗೆ ಪಡೆದ ಗುತ್ತಿಗೆದಾರರಿಗೆ ಪೋನ ಮಾಡಿದರೆ ಅಸಮಂಜಸ ಉತ್ತರ ನೀಡುತ್ತಾರೆ ಎನ್ನುತ್ತಾರೆ ರೈತ ಸಂಘದ ಉಪಾಧ್ಯಕ್ಷ ಹನುಮಂತ ಗೌಡ ಬಿಷ್ಟನ ಗೌಡ್ರ. ಜೊತೆಗೆ ಉಪ ಕಾಲುವೆ ನಿಮರ್ಾಣಕ್ಕಾಗಿ ಹಲವಾರು ಜನರು ತಮ್ಮ ಜಮೀನುಗಳನ್ನು ಕಳೆದುಕೊಂಡಿದ್ದಾರೆ ಆದರೆ ಇದುವರೆಗೂ ಅವರಿಗೆ ಪರಿಹಾರ ಹಣ ಬಂದಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.  ಇತ್ತ ಇಂತಹ ಕಳಪೆ ಕಾಮಗಾರಿಯಿಂದಾಗಿ ರೈತರ ಹೊಲಗಳಿಗೆ ನೀರು ಸರಬರಾಜು ವಾಗದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗುತ್ತದೆ. ಆದ್ದರಿಂದ ಈಗಲಾದರೂ ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕ ನೆಹರು ಓಲೇಕಾರ ಮದ್ಯ ಸ್ಥಿಕೆ ವಹಿಸಿ ರೈತರ ಸಮಸ್ಯೆಗೆ ಶ್ವಾಶತ ಪರಿಹಾರ ನೀಡುವಂತಾಗಲಿ ಎಂಬುದು ಅಲ್ಲಿಯ ರೈತಾಪಿವರ್ಗದವರ ಆಗ್ರಹವಾಗಿದೆ.