ಕಂಪ್ಲಿ: ನಾನು ಕಾಂಗ್ರೆಸ್ ಬಿಟ್ಟು ಹೋಗಲ್ಲ ಶಾಸಕ ಗಣೇಶ ಹೇಳಿಕೆ

ಲೋಕದರ್ಶನ ವರದಿ

ಕಂಪ್ಲಿ 08: ನವ ದಂಪತಿಗಳು ಕುಟುಂಬದ ಹಿರಿಯರನ್ನು ಗೌರವದಿಂದನೋಡಿಕೊಳ್ಳಬೇಕು ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.

ತಾಲೂಕಿನ ರೆಗ್ಯುಲೇಟರ್ಕ್ಯಾಂಪ್ನಲ್ಲಿ ಶ್ರೀವಿಶ್ವಗುರು ಬಸವಾದಿ ಪ್ರಮಥರ ಧ್ಯಾನ ಮಂದಿರದವತಿಯಿಂದ ಅಕ್ಷಯ ತೃತೀಯ ದಿನವಾದ ಮಂಗಳವಾರ ಬಸವೇಶ್ವರ ಜಯಂತಿ ಅಂಗವಾಗಿ  ಸಾಮೂಹಿಕ ವಿವಾಹದ 7 ಜೋಡಿಗಳಿಗೆ ಶುಭ ಹಾರೈಸಿ ಮಾತನಾಡಿ 

ಹುಟ್ಟುವ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು.ಉನ್ನತ ಹುದ್ದೆಯನ್ನು ಪಡೆಯಬೇಕೆಂದರು. ಬಸವ ಜಯಂತಿಯ ಶುಭದಿನ ಇರುವುದರಿಂದ ಕ್ಷೇತ್ರಕ್ಕೆ ಬಂದಿದ್ದೇನೆ.  ಮುಂದಿನ 4 ವರ್ಷದಲ್ಲಿ  ಕ್ಷೇತ್ರಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುಂದಾಗುತ್ತೇನೆ. ನಾನು ಕಾಂಗ್ರೆಸ್ ಪಕ್ಷ ಬಿಟ್ಟು ಎಲ್ಲು ಹೋಗಲ್ಲ. ಗೊಂದಲ ಸೃಷ್ಠಿಯಾದರೆ ಅದು ಮಾಧ್ಯಮಗಳಿಂದಲೆ ಮಾತ್ರ ಹೊರತು ಬೇರೆ ಯಾವುದರಿಂದಲು ಅಲ್ಲ. ಸಕರ್ಾರದಲ್ಲಿ ಗೊಂದಲವಿಲ್ಲ, ಸರ್ಕಾರ  ಸುಭದ್ರವಾಗಿದೆ. ಎಂದರು.

ಕಂಪ್ಲಿ ಕಲ್ಮಠದ ಅಭಿನವ ಪ್ರಭುಸ್ವಾಮೀಜಿಗಳ ಸಾನ್ನಿಧ್ಯದಲ್ಲಿ 7 ಉಚಿತ ಸಾಮೂಹಿಕ ವಿವಾಹಗಳು ನೆರವೇರಿದವು. ಶರಣ ನಾಗಪ್ಪ ತಾತ, ಶರಣೆ ಸಾವಿತ್ರಮ್ಮ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು 

ಈ ಸಂದರ್ಭದಲ್ಲಿ. ನಿವೃತ್ತ ಶಿಕ್ಷಕ ಮ.ಬ.ಸೋಮಣ್ಣ. ಜಿಪಂ ಸದಸ್ಯ ಕೆ.ಶ್ರೀನಿವಾಸರಾವ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಷಣ್ಮುಖಪ್ಪ, ತಾಪಂ ಸದಸ್ಯ ಹೆಚ್.ಈರಣ್ಣ, ಮುಖಂಡರಾದ ಹರಗಿನಡೋಣಿ ಜಡಿಯಪ್ಪಗುರುಮೂರ್ತಿ, ಶಿವಮೂರ್ತಿ, ಮಾರುತಿ, ವೀರೇಶ, ನೇಮಕಲ್ಲಪ್ಪ, ನಾಯಕರ ಸಿದ್ದಪ್ಪ, ರಾಮಣ್ಣ, ಜವುಕು ನಿಂಗಪ್ಪ, ದೊಡ್ಡ ವೆಂಕಪ್ಪ, ಕೆಂಚಪ್ಪ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.