ಕೊಪ್ಪಳ 29: ಮಕ್ಕಳ ಪ್ರತಿಭೆಯನ್ನು ಗುರುತಿಸಲು ಶಿಬಿರಗಳು ಸಹಕಾರಿಯಾಗಿವೆ ಎಂದು ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಭಾರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿರೇಂದ್ರ ನವಾದಗಿ ಅವರು ಹೇಳಿದರು.
ಧಾರವಾಡ ಬಾಲ ವಿಕಾಸ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸುಧಾರಣಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬಾಲಮಂದಿರಗಳಲ್ಲಿ ಇತಿಚ್ಚಿಗೆ ಆಯೋಜಿಸಿದ "ವ್ಯಕ್ತಿತ್ವ ವಿಕಸನ ಶಿಬಿರ"ದ ಮುಕ್ತಾಯ ಸಮಾರಂಭವನ್ನು ಬಾಲಕರ ಬಾಲಮಂದಿರದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿದ ಕೊಪ್ಪಳ ಜಿಲ್ಲಾ ಪ್ರಭಾರಿ ಮಕ್ಕಳ ರಕ್ಷಣಾಧಿಕಾರಿಗಳು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಿರೇಂದ್ರ ನವಾದಗಿ ಅವರು ಬಾಲಮಂದಿರದ ಮಕ್ಕಳನ್ನು ಮೊದಲು ಅವಕಾಶ ವಂಚಿತ ಮಕ್ಕಳೆಂದು ಇವರನ್ನು ಸುಧಾರಣೆ ಮಾಡುವುದು ಕಷ್ಟವೆಂದುಕೊಳ್ಳುತ್ತಿದ್ದೇವು, ಅದರೆ ಈಗ ಮಕ್ಕಳಿಗೆ ಸಕರ್ಾರದಿಂದ ಹಲವಾರು ಯೋಜನೆಗಳು ಜಾರಿಯಲ್ಲಿದ್ದು ಮಕ್ಕಳಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಮತ್ತು ಮಕ್ಕಳಿಗೆ ಊಟ,ಬಟ್ಟೆ,ವಸತಿಯನ್ನಷ್ಟೆ ಒದಗಿಸುವುದಲ್ಲದೆ ಸೂಕ್ತ ಪ್ರತಿಭೆಯನ್ನು ಹೊರತೆಗೆಯಲು ಇಂತಹ ಶಿಬಿರಗಳು ಸಹಾಯಕವಾಗಿವೆ ಎಂದು ತಿಳಿಸಿದರು. ಮಕ್ಕಳಿಗೆ ಬಾಲಮಂದಿರಗಳು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ನೀಡುತಿದ್ದು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಪಡೆದುಕೊಳ್ಳಬಹುದು ಎಂದು ಪ್ರಭಾರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿರೇಂದ್ರ ನವಾದಗಿ ಕರೆ ನೀಡಿದರು.
"ವ್ಯಕ್ತಿತ್ವ ವಿಕಸನ ಶಿಬಿರ"ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಪ್ಪಳ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದೇರ್ಶಕ ಈರಣ್ಣಾ ಪಾಂಚಾಳ್ ರವರು ಮಾತನಾಡಿ, ಈ ಶಿಬಿರವು 7 ದಿನಕ್ಕೆ ಮಾತ್ರ ಸೀಮಿತವಾಗಿರದೆ ಬಾಲಮಂದಿರದ ಎಲ್ಲಾ ಸಿಬ್ಬಂದಿಗಳು ಪ್ರತಿನಿತ್ಯ ಮಕ್ಕಳಿಗೆ ಯೋಗ ಹಾಗೂ ಇತರೆ ಚಟುವಟಿಕೆಗಳನ್ನು ಮಾಡಿಸುವಂತೆ ಸೂಚಿಸಿ. ನಂತರ ಮುಂದಿನ ರಾಷ್ಟ್ರಿಯ ಕಾರ್ಯಕ್ರಮಗಳಲ್ಲಿ ಸದರಿ ಬಾಲಮಂದಿರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡಿಸುವಂತೆ ತಯಾರಿಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಗೊಂಡು ಮಾತನಾಡಿದ ಧಾರವಾಡ ಬಾಲವಿಕಾಸ ಅಕಾಡೆಮಿ ಸದಸ್ಯ ಗವಿಸಿದ್ದಪ್ಪ ಅವರು ಸಂಪನ್ಮೂಲ ವ್ಯಕ್ತಿಗಳಿಂದ ಹಲವು ವಿಷಯಗಳು ಹಾಗೂ ಚಟುವಟಿಕೆಗಳು ಮಕ್ಕಳಿಗೆ ನೀಡಿರುತ್ತಾರೆ ಎಂದು ಭಾವಿಸುತ್ತಾ ವ್ಯಕ್ತಿತ್ವ ವಿಕಸನ ಶಿಬಿರವು ಮಕ್ಕಳ ಜೀವನಕ್ಕೆ ಸಹಕಾರಿಯಾಗಿರಲೆಂದು ಹಾರೈಸಿದರು.
ಕೊಪ್ಪಳ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಜಯಶ್ರಿ, ಜಿಲ್ಲಾ ಬಾಲಕರ ಬಾಲಮಂದಿರ ಅಧೀಕ್ಷಕರು ರೋಹಿಣಿ ಕೊಟಗಾರ, ಜಿಲ್ಲಾ ಬಾಲಕಿಯರ ಬಾಲಮಂದಿರ ಅಧೀಕ್ಷಕರು ಮಹೇಶ್ವರಿ, ಸಂಪನ್ಮೂಲ ವ್ಯಕ್ತಿಗಳಾದ ರಾಘವೇಂದ್ರ ಅರಕೇರಿ ಸೇರಿದಂತೆ ನೃತ್ಯ & ಯೋಗ ಶಿಕ್ಷಕರು ಹಾಗೂ ಸಿಬ್ಬಂದಿವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.