ಟಿಬಿ ಕಾಯಿಲೆ ಪತ್ತೆ ಹಾಗೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಆಂದೋಲನ -ಡಾ. ಅಶೋಕ್ಕುಮಾರ್

ಟಿಬಿ ಕಾಯಿಲೆ ಪತ್ತೆ ಹಾಗೂ ನಿಯಂತ್ರಣಕ್ಕೆ  ಆರೋಗ್ಯ ಇಲಾಖೆಯಿಂದ ಆಂದೋಲನ -ಡಾ. ಅಶೋಕ್ಕುಮಾರ್ 


ಕಾರವಾರ 21: ಟಿಬಿ ಕಾಯಿಲೆ ಪತ್ತೆ ಹಾಗೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಆಂದೋಲನವು ನವ್ಹೆಂಬರ್  25 ನಿಂದ  ಡಿಸೆಂಬರ್ 10ರ ವರೆಗೆ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಅಶೋಕ್ ಕುಮಾರ್ ಹೇಳಿದರು. 

ಕಾರವಾರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ಮಾಡಿದ ಅವರು  ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಷ್ಠರೋಗ ಪತ್ತೆ ಆಂದೋಲನದ ಜೊತೆಗೆ ಸಕ್ರೀಯ ಕ್ಷಯರೋಗ  ಪತ್ತೆ ಆಂದೋಲನವು ಸಹ ನಡೆಯಲಿದ್ದು ಸಮೀಕ್ಷೆ ಮಾಡುವ ಬಗ್ಗೆ ಜಂಟಿ ಕ್ರಿಯಾ ಯೋಜನೆ ರೂಪಿಸಲಾಗಿದೆ. ಮನೆ ಮನೆ ಭೇಟಿ ಮಾಡುವ ಮೂಲಕ ಜನರಲ್ಲಿ ಟಿಬಿ ಕಾಯಿಲೆಯ ಲಕ್ಷಣಗಳನ್ನು ತಿಳಿಸಲಾಗುವುದು. ಆ ಮೂಲಕ ಟಿ.ಬಿ ಪ್ರಕರಣಗಳನ್ನು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುವುದು ಹಾಗೂ ಆ ಮೂಲಕ  ಕ್ಷಯರೋಗ ಹರಡುವುದನ್ನು  ನಿಯಂತ್ರಿಸುವ ಉದ್ದೇಶವಿದೆ ಎಂದು ಡಿಎಚ್ಓ ಆಶೋಕ ಕುಮಾರ್ ವಿವರಿಸಿದರು. ಟಿಬಿ ಕಾಯಿಲೆ  ಪತ್ತೆ ಆಂದೋಲವು ಜಿಲ್ಲೆಯ ಒಟ್ಟೂ ಜನ ಸಂಖ್ಯೆಯನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿದ್ದು,  ಕೊಳಚೆ ಪ್ರದೇಶದ ನಿವಾಸಿಗಳು, ಜೈಲುಗಳಲ್ಲಿನ ಕೈದಿಗಳು, ವೃದ್ದಾಪ್ಯ ಕೇಂದ್ರಗಳು, ಕಟ್ಟಡ ನಿಮರ್ಾಣ ಕಾಮರ್ಿಕರು,  ನಿರಾಶ್ರಿತರ ಶಿಬಿರಗಳು, ವಸತಿ ಇಲ್ಲದವರು, ಬೀದಿ ಮಕ್ಕಳು, ಅನಾಥಾಶ್ರಮಗಳು, ಅಸಂಘಟಿತ ಕಾಮರ್ಿಕರು, ಅಪೌಷ್ಟಿಕತೆ ಹೆಚ್ಚಿರುವ ಪ್ರದೇಶಗಳ ನಿವಾಸಿಗಳನ್ನು ಹಾಗೂ ಟಿಬಿ ರೋಗಕ್ಕೆ ತುತ್ತಾಗಬಹುದಾದ ಅಪಾಯದಲ್ಲಿರುವ ಜನರ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದರು. ವ್ಯಕ್ತಿಗಳ ರೋಗ ಲಕ್ಷಣಗಳ ತಪಾಸಣೆ, ರೋಗ ಲಕ್ಷಣಗಳನ್ನು ಹೊಂದಿದ ಶಂಕಿತರಿಗೆ ಕಫ ಪರೀಕ್ಷೆಗೆ ಸಲಹೆ ನೀಡುವುದು, ಕಫ ಸಂಗ್ರಹಿಸಿ ಪರೀಕ್ಷೆಗೆ ರವಾನಿಸುವುದು ಹಾಗೂ ಇತರ ಅವಶ್ಯ ಪರೀಕ್ಷೆಗಳನ್ನು ಮಾಡಲಾಗುವುದು ಎಂದರು. ಎರಡು ವಾರ ಅಥವಾ ಅದಕ್ಕಿಂತ ಮೇಲ್ಪಟ್ಟು ಕೆಮ್ಮು, ಜ್ವರ, ಅದರಲ್ಲೂ ಸಂಜೆ ವೇಳೆ ಜ್ವರ ಬರುವುದು, ಎದೆ ನೋವು, ತೂಕ ಕಡಿಮೆಯಾಗುವುದು, ಹಸಿವಾಗದೇ ಇರುವುದು, ಕಫ, ಕಫದಲ್ಲಿ ರಕ್ತ ಬೀಳುವುದು, ಕುತ್ತಿಗೆಯಲ್ಲಿ ಗಂಟುಗಳು ಕಾಣಿಸಿಕೊಳ್ಳುವುದು ಟಿಬಿ ರೋಗದ ಲಕ್ಷಣಗಳು ಎಂದು ಅವರು ವಿವರಿಸಿದರು. 

ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟೂ 3,29,347 ಮನೆಗಳನ್ನು ಸಮೀಕ್ಷೆ ಮಾಡಿ ಅವರಲ್ಲಿ ಕ್ಷಯರೋಗದ ಲಕ್ಷಣ ಕಂಡು ಬಂದಲ್ಲಿ ಕಫ ತಪಾಸಣೆ ಮಾಡುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಒಟ್ಟೂ 1454 ತಂಡಗಳನ್ನು ರಚಿಸಲಾಗಿದೆ. ಪ್ರತಿ ಸಮೀಕ್ಷಾ ತಂಡದಲ್ಲಿ ಒಂದು ಅಶಾ ಹಾಗೂ ಒಬ್ಬರು ಸ್ವಯಂ ಸೇವಕರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದು ಕ್ರಿಯಾ ಯೋಜನೆಯಂತೆ ಪ್ರತಿ ಮನೆಗಳ ಬೇಟಿ ನೀಡಿ ಕ್ಷಯರೋಗದ ಬಗ್ಗೆ ಮಾಹಿತಿ ನೀಡಿ ರೋಗದ ಲಕ್ಷಣ ಇದ್ದವರಿಗೆ ಕಫ ಪರೀಕ್ಷೆ ಹಾಗೂ ಇತರೆ ಅವಶ್ಯಕ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. ಕ್ಷಯರೋಗ ದೃಡ ಪಟ್ಟ ರೋಗಿಗಳಿಗೆ ನೇರ ನಿಗಾವಣೆ (ಆಔಖಿಖ) ಮೂಲಕ ಚಿಕಿತ್ಸೆ ಉಚಿತವಾಗಿ ನೀಡಲಾಗುವುದು ಎಂದರು.

   ಕ್ಷಯರೋಗ ಮುಕ್ತ ಭಾರತ ನಿಮರ್ಾಣ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಜನಪ್ರತಿನಿಧಿಗಳು,  ಸಮುದಾಯದ ಮುಖಂಡರು, ಸಾರ್ವಜನಿಕರು, ಸ್ವಯಂ ಸೇವಾ ಸಂಘ ಸಂಸ್ಥೆಯವರು, ಇತರೆ ಇಲಾಖೆಗಳು ಹಾಗೂ ಮಾದ್ಯಮ ಮಿತ್ರರು ಸಕ್ರೀಯವಾಗಿ ಭಾಗವಹಿಸಿ ಕ್ಷಯ ಮುಕ್ತ ಸಮಾಜ ನಿಮರ್ಾಣ ಮಾಡಲು ಸಹಕಾರ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳಾದ ಡಾ. ಜಿ.ಎನ್ ಅಶೋಕಕುಮಾರ ವಿನಂತಿಸಿದರು.

ಜಗತ್ತಿನ ಒಟ್ಟೂ ಕ್ಷಯರೋಗಿಗಳಲ್ಲಿ ಭಾರತವು ಶೇ. 25 ರಷ್ಟು ಕ್ಷಯರೋಗಿಗಳನ್ನು ಹೊಂದಿದೆ.  ವಾಷರ್ಿಕವಾಗಿ ಜಗತ್ತಿನಾದ್ಯಂತ 1 ಕೋಟಿ 30 ಲಕ್ಷದಷ್ಟು ಜನರು ಟಿಬಿ ಕಾಯಿಲೆಗೆ ಗುರಿಯಾಗುತ್ತಾರೆ. ಭಾರತದಲ್ಲಿ ಪ್ರತಿ ವರ್ಷ 27 ಲಕ್ಷ ಜನರು ಟಿಬಿ ಕಾಯಿಲೆಗೆ ಗುರಿಯಾಗುತ್ತಿದ್ದಾರೆ. ಹಾಗೂ  2.2 ಲಕ್ಷದಷ್ಟು ಜನರು ಟಿಬಿ ಕಾಯಿಲೆಯಿಂದ ಮರಣ ಹೊಂದುತ್ತಾರೆ.  ಒಬ್ಬ ಕ್ಷಯರೋಗಿ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ತನ್ನ ಪರಿಸರದಲ್ಲಿ  ಸರಿ ಸುಮಾರು 10 ರಿಂದ 15 ಜನರಿಗೆ ಸೋಂಕು ಹರಡುವ ಅಪಾಯವಿದೆ. ಹಾಗಾಗಿ ದೇಶವನ್ನು 2025 ರ ಒಳಗಾಗಿ ಕ್ಷಯ ಮುಕ್ತ ರಾಷ್ಟ್ರವನ್ನಾಗಿ ಮಾಡುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಶಂಕರ್ ರಾವ್,ಮಹಾಬಲೇಶ್ಚರ ಹೆಗಡೆ, ಶರತ್ ನಾಯಕ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಜಿ.ನಾಯ್ಕ ಉಪಸ್ಥಿತರಿದ್ದರು.