ನವದೆಹಲಿ, ಮೇ29, ದೆಹಲಿ ದೂರದರ್ಶನದ ಕ್ಯಾಮೆರಾಮ್ಯಾನ್ ಯೋಗೇಶ್ ಕುಮಾರ್ ಎಂಬುವರು ಕೊರೋನಾ ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಕಚೇರಿಯನ್ನು ಬಂದ್ ಮಾಡಲಾಗಿದೆ.
ಯೋಗೇಶ್ ಕುಮಾರ್ ಅವರಿಗೆ ಯಾವುದೇ ಕೊರೋನಾ ಸೋಂಕಿ ಲಕ್ಷಣಗಳಿರಲಿಲ್ಲ. ಅವರು ಗುರುವಾರ ತಮ್ಮ ಮನೆಯಲ್ಲಿ ಹೃದಯಾಘಾತಕ್ಕೊಳಗಾಗಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದರು. ಆದರೆ, ನಂತರ ವೈದ್ಯಕೀಯ ವರದಿಯಲ್ಲಿ ಅವರಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಈ ವರದಿ ಹಿನ್ನೆಲೆಯಲ್ಲಿ ದೂರದರ್ಶನ ಕೇಂದ್ರವನ್ನು ಎರಡು ದಿನಗಳ ಅವಧಿಗೆ ಸ್ಥಗಿತಗೊಳಿಸಲಾಗಿದ್ದು, ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ.