ಗಡಿಭಾಗದಲ್ಲಿ ಚಿಣ್ಣರ ಮನರಂಜಿಸುತ್ತಿರುವ ಒಂಟೆಗಳು
Camels entertaining children in the border area.
ಲೋಕದರ್ಶನ ವರದಿ
ಹಾರೂಗೇರಿ ೨೪ : ಚಿಣ್ಣರನ್ನು ಖುಷಿ ಪಡಿಸಲು ಮರಳು ನಾಡಿನ ಒಂಟೆಗಳು ಹಾರೂಗೇರಿಗೆ ಲಗ್ಗೆ ಇಟ್ಟಿದ್ದು, ಮಕ್ಕಳಿಗಂತೂ ಮರಭೂಮಿಯ ಪ್ರಾಣಿಗಳ ಕಂಡು ಸಂಭ್ರಮವೋ ಸಂಭ್ರಮ ಒಂಟೆಗಳ ಮೇಲೆ ಸವಾರಿ ಮಾಡಿ ಸಂಭ್ರಮಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ರಾಜ್ಯದಲ್ಲಿ ನಡೆಯುವ ನಾಗರ ಪಂಚಮಿ, ಗಣೇಶ ಚತುರ್ಥಿ, ದೀಪಾವಳಿ ಹಾಗೂ ರಜೆಗಳ ಸಂಭ್ರಮಾಚರಣೆ ಹೊಸ್ತಿಲಲ್ಲಿ ರಾಜಸ್ಥಾನ ಮೂಲದ ಕೆಲವರು ಹೊಟ್ಟೆ ಪಾಡಿಗಾಗಿ ಆರೇಳು ಒಂಟೆಗಳನ್ನು ತಂದಿದ್ದು, ನಾಲ್ಕಾರು ತಿಂಗಳುಗಳ ಕಾಲ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ವಿವಿಧ ಬಡಾವಣೆಗಳಿಗೆ ತೆರಳಿ ಚಿಣ್ಣರನ್ನು ಒಂಟೆ ಮೇಲೆ ಸವಾರಿ ಮಾಡಿಸಿ ಹಣ ಗಳಿಸುತ್ತಿದ್ದಾರೆ. ಸಾಮಾನ್ಯವಾಗಿ ಮರಭೂಮಿಯ ಪ್ರದೇಶದಲ್ಲಿ ಕಂಡು ಬರುವ ಒಂಟೆಗಳು ನಮ್ಮ ಭಾಗಕ್ಕೆ ಆಗಮಿಸಿರುವುದು ಮಕ್ಕಳಿಗೆ ಹೊಸ ಅನುಭವವಾಗಿದೆ. ಎತ್ತರವಾದ ದೇಹ, ಉದ್ದನೆಯ ಕುತ್ತಿಗೆ, ವಿಶಿಷ್ಠವಾದ ನಡಿಗೆ ಹಾಗೂ ಶಾಂತ ಸ್ವಭಾವದಿಂದ ಒಂಟೆಗಳು ಗಮನ ಸೆಳೆಯುತ್ತಿವೆ. ಮಕ್ಕಳು ಖುಷಿಯಿಂದ ಸವಾರಿ ಮಾಡುತ್ತಿದ್ದಾರೆ. ಮಕ್ಕಳನ್ನು ಒಂಟೆಗಳ ಮೇಲೆ ಕುಳಿತುಕೊಂಡು ಆಯಾ ಬಡಾವಣೆಯ ಸುತ್ತ ಸವಾರಿ ನಡೆಸಿದರೆ ಒಂದು ಮಗುವಿಗೆ ೫೦ ರೂ. ಪಡೆಯುತ್ತಾರೆ. ಒಂಟೆಗಳು ತನ್ನ ಮೈಮೇಲೆ ಹತ್ತಿಸಿಕೊಂಡು ಮಕ್ಕಳನ್ನು ಹೊತ್ತು ಸಾಗುತ್ತವೆ. ಇದೊಂತರಾ ಮಕ್ಕಳಿಗೆ ಮೋಜೆನಿಸಿದರೆ, ಮಾಲೀಕರಿಗೆ ಹೊಟ್ಟೆಪಾಡು. ಒಂಟೆಗಳ ಮೇಲೆ ಕುಳಿತು ಸವಾರಿ ಮಾಡುವ ಅವಕಾಶ ದೊರೆತಿರುವುದರಿಂದ ಮಕ್ಕಳು ಉತ್ಸಾಹದಿಂದ ಕುಟುಂಬದವರೊAದಿಗೆ ಆಗಮಿಸಿ, ಫೋಟೋಗಳನ್ನು ತೆಗೆಸಿಕೊಳ್ಳುವುದರ ಮೂಲಕ ವಿಶಿಷ್ಠ ಅನುಭವ ಪಡೆಯುತ್ತಿದ್ದಾರೆ. ಒಂಟೆಗಳ ಆಗಮನವು ಮನರಂಜನೆಯ ಜತೆಗೆ ಮಕ್ಕಳಿಗೆ ಪ್ರಾಣಿ ಜಗತ್ತಿನ ಕುರಿತು ತಿಳಿದುಕೊಳ್ಳುವ ಅವಕಾಶವೂ ಒದಗಿಸಿದೆ. ಒಂಟೆಗಳ ದೇಹರಚನೆ, ಆಹಾರ ಪದ್ದತಿ, ಜೀವನಶೈಲಿ ಹಾಗೂ ಮರಭೂಮಿಯ ಪರಿಸರಕ್ಕೆ ಹೊಂದಿಕೊAಡಿರುವ ವೈಶಿಷ್ಠö್ಯಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡುತ್ತಿದೆ. ಇಂತಹ ಅನುಭವಗಳು ಪಠ್ಯಪುಸ್ತಕದ ಜ್ಞಾನಕ್ಕಿಂತ ಭಿನ್ನವಾಗಿ ನೇರವಾಗಿ ಅರಿವು ಮೂಡಿಸಲು ಸಹಕಾರಿಯಾಗಿದೆ.
ಮಕ್ಕಳ ಮನರಂಜಿಸುತ್ತಿರುವ ಒಂಟೆಗಳು ಬೇರೆಬೇರೆ ಊರುಗಳಿಗೆ ಹೋಗುವಾಗ ಸೊಪ್ಪು, ಸೌದೆ ಹೊತ್ತು ಸಾಗುತ್ತವೆ. ಎತ್ತರದ ಪ್ರಾಣಿ ಅದೆಷ್ಟೋ ಮಕ್ಕಳ ಪಾಲಿನ ಮನರಂಜನೆಗೂ ಕಾರಣವಾಗಿದೆ. ಒಂಟೆ ಮೇಲೆ ಮಕ್ಕಳನ್ನು ಕೂರಿಸಿ, ಸವಾರಿ ಮಾಡುವುದನ್ನು ನೋಡುವುದೇ ಪಾಲಕರಿಗೆ ಖುಷಿ ಎನಿಸುತ್ತದೆ. ಮರಳು ನಾಡಿನ ಜೀವಿ, ಒಂಟೆಗಳು ನಮ್ಮ ಭಾಗಕ್ಕೆ ಆಗಮಿಸಿವೆ. ಒಂಟೆಗಳು ಮಕ್ಕಳನ್ನು ರಂಜಿಸುವ ಮೂಲಕ ಬಡ ಕುಟುಂಬಗಳ ಪಾಲಿಗೆ ಆಧಾರವಾಗಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 