ಕಾಂಗ್ರೆಸ ಶತಮಾನೋತ್ಸವ ಬೃಹತ್ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆ ತನ್ನಿ: ಮಹಾವೀರ ಮೋಹಿತೆ
ರಾಯಬಾಗ: ಬೆಳಗಾವಿಯಲ್ಲಿ ಡಿ.26 ಮತ್ತು 27 ರಂದು ನಡೆಯಲಿರುವ ಕಾಂಗ್ರೆಸ ಶತಮಾನೋತ್ಸವ ಬೃಹತ್ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೂತ ಮಟ್ಟದಿಂದ ಕಾರ್ಯಕರ್ತರನ್ನು ಕರೆತರಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ಹೇಳಿದರು.
ರವಿವಾರ ಪಟ್ಟಣದ ಕಾಂಗ್ರೆಸ ಕಚೇರಿಯಲ್ಲಿ ಕಾಂಗ್ರೆಸ ಅಧಿವೇಶನದ ಶತಮಾನೋತ್ಸವ ಸಮಾರಂಭ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ ಅಧಿವೇಶನದ ಶತಮಾನೋತ್ಸವ ಯಶಸ್ಸುಗೊಳಿಸಲು ಎಲ್ಲರೂ ಕೈಜೋಡಿಸಬೇಕೆಂದರು.
ಎಐಸಿಸಿ ಉಸ್ತುವಾರಿ ನಿಂಗಪ್ಪ ಕುಡೋಲಿ, ಹಾಜಿ ಮುಲ್ಲಾ, ದೀಲೀಪ ಜಮಾದಾರ, ತಮ್ಮಣ್ಣ ನಿಂಗನೂರೆ, ಅರ್ಜುನ ಬಂಡಗರ, ಬಾಹುಸಾಹೇಬ ಪಾಟೀಲ, ಹರೀಶ ಕುಲಗುಡೆ, ಶ್ರವಣ ಕಾಂಬಳೆ, ಫಾರೂಕ ಮೋಮಿನ, ಶ್ರೀಮಂತ ಸಲಗರೆ ಸೇರಿ ಕಾಂಗ್ರೆಸ ಮುಖಂಡರು ಇದ್ದರು.ಫೋಟೊ: 23 ರಾಯಬಾಗ 4ಫೋಟೊ ಶೀರ್ಷಿಕೆ: ರಾಯಬಾಗ: ಪಟ್ಟಣದ ಕಾಂಗ್ರೆಸ ಕಚೇರಿಯಲ್ಲಿ ಕಾಂಗ್ರೆಸ ಅಧಿವೇಶನದ ಶತಮಾನೋತ್ಸವ ಸಮಾರಂಭ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ಮಾತನಾಡಿದರು.