ದಾಂಡೇಲಿ: ಅನಂತ ಗೆಲುವಿಗೆ ಅಲ್ಪಸಂಖ್ಯಾತ ಘಟಕದಿಂದ ಕರೆ

ಲೋಕದರ್ಶನ ವರದಿ

ದಾಂಡೇಲಿ 20: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆ ಅವರನ್ನು ಗೆಲ್ಲಿಸಬೇಕೆಂದು ದೃಡ ನಿಚ್ಛಯ ಮಾಡಿದ್ದೇವೆ ಈಗಾಗಲೇ ಐದು ಬಾರಿ ಸಂಸದರಾಗಿರುವ ಹೆಗಡೆ ಅವರು ಈ ಬಾರಿ ಗೆದ್ದರೆ ಪ್ರಧಾನಿ ಮೊದಿ ಅವರ ಸಚಿವ ಸಂಪುಟದಲ್ಲಿ ಮುಖ್ಯ ಖಾತೆಯನ್ನು ಪಡೆಯಲಿದ್ದಾರೆ ಇದರಿಂದ ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ಲಾಭವಾಗಲಿದೆ ಆ ಕಾರಣ ಕೆನರಾ ಲೋಕಸಭಾ ಕ್ಷೇತ್ರದ ಎಲ್ಲ ಅಲ್ಪಸಂಖ್ಯಾತರು ಅನಂತಕುಮಾರ ಹೆಗಡೆಗೆ ಮತ ನೀಡಬೇಕೆಂದು ಪತ್ರಿಕಾ ಗೊಷ್ಟಿಯಲ್ಲಿ ದಾಂಡೇಲಿ ಘಟಕದ ಪದಾಧಿಕಾರಿಗಳು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಜೆ.ಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಫೀಕ ಹುದ್ದಾರ ಕಳೆದ ಐದು ವರ್ಷಗಳಿಂದ ಪ್ರಧಾನಿ ಮೊದಿ ಅವರ ದೂರದೃಷ್ಟಿವುಳ್ಳ ಅಭಿವೃದ್ಧಿ ಕಾರ್ಯಗಳಿಂದ ದೇಶ ಪ್ರಗತಿಯಲ್ಲಿ ಸಾಗಿದೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಆಯುಷ್ಮಾನ ಭಾರತ ಹಾಗೂ ಉಜ್ವಲ ಗ್ಯಾಸ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಲಾಭವಾಗಿದೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಬೆಂಬಲವನ್ನು ಸುನೀಲ ಹೆಗಡೆಗೆ ನೀಡಿದ್ದೇವೆ ಈ ಬಾರಿ ಅನಂತಕುಮಾರ ಹೆಗಡೆ ಅವರಿಗೆ ಜಿಲ್ಲೆಯ ಅಲ್ಪಸಂಖ್ಯಾತರು ಸಂಪೂರ್ಣ ಬೆಂಬಲ ನೀಡಬೇಕೆಂದು ಕರೆ ನೀಡಿದರು.

ಜಿಲ್ಲಾ ಅಲ್ಪಸಂಖ್ಯಾತ ಸದಸ್ಯ ಫೀರೊಜ ಪಿರಜಾದೆ ಮಾತನಾಡಿ ಸಮಿಶ್ರ ಸರಕಾರದ ಅಭ್ಯಥರ್ಿ ಯಾರೆಂದು ಮತದಾರರಿಗೆ ತಿಳಿದಿಲ್ಲ ಹಿಗಿರುವಾಗ ಅವರು ಗೆಲುವಿನ ಕನಸು ಕಾಣುವುದು ತಪ್ಪು ಕೆಲವೆ ಕೆಲವು ಜನರಿಂದ ಭಾ.ಜ.ಪಾ ಪಕ್ಷದ ಬಗ್ಗೆ ಅಲ್ಪಸಂಖ್ಯಾತರಲ್ಲಿ ತಪ್ಪು ಕಲ್ಪನೆ ಬರುವಂತಾಗಿದೆ ಆದರೆ ಇದೆಲ್ಲವನ್ನು ಬದಿಗೊತ್ತಿ ನಾವೆಲ್ಲರೂ ಭಾರತಿಯರೆಂದು ತಿಳಿಯಬೇಕಾಗಿದೆ ಮುಸ್ಲಿಂ ಸಮುದಾಯದವರಾದ ನಾವು ನಮ್ಮ ನೆಚ್ಚಿನ ಅಭ್ಯಥರ್ಿ ಅನಂತಕುಮಾರ ಹೆಗಡೆ ಅವರನ್ನು ಗೆಲ್ಲಿಸಬೇಕಾಗಿದೆ ಎಂದು ಹೇಳಿದರು.  ಬಿ.ಜೆ.ಪಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷೆ ಹಸೀನಾ ಮಕಾನದಾರ ಮಾತನಾಡಿ ಬೇಟಿ ಪಡಾವೊ ಬೇಟಿ ಬಚಾವೊ ಯೋಜನೆಯಿಂದ ಅಲ್ಪಸಂಖ್ಯಾರಿಗೆ ಹೆಚ್ಚಿನ ಲಾಭವಾಗಿದೆ ಅಲ್ಲದೆ ಪ್ರಧಾನ ಮಂತ್ರಿ ಜನಔಷದಿ ಕೇಂದ್ರದಿಂದ ಬಡವರು ಸಹ ಅತ್ಯಂತ ಕಡಿಮೆ ಬೆಲೆಯಲ್ಲಿ ಜಿವ ರಕ್ಷಕ ಔಷದಿಗಳನ್ನು ಪಡೆಯ ಬಹುದಾಗಿದೆ  ಇದರಲ್ಲಿ ಸಹ ಜನಸಾಮಾನ್ಯರ ಜಾತಿ ಧರ್ಮ ಗುರುತಿಸುವುದಿಲ್ಲ ಹಿಗಿರುವಾಗ ಅಲ್ಪಸಂಖ್ಯಾತರು ಅನಂತಕುಮಾರ ಹೆಗಡೆಗೆ ಮತನೀಡಬೇಕೇಂದು ಕರೆ ನೀಡಿದರು  ಈ ಸಂಧರ್ಭದಲ್ಲಿ ದಾಂಡೇಲಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಿಯಾಜ ಶೇಕ್ ದಾಂಡೇಲಿ ಬಿ.ಜೆ.ಪಿ ಮೊರ್ಚ ಉಪಾಧ್ಯಕ್ಷ ಜೋಸೆಪ್ ಫನರ್ಾಂಡಿಸ್ ಜಿಲ್ಲಾ ಕಾರ್ಯದಶರ್ಿ ಅಪ್ತಾಬ್ ಶೇಕ್ ಉಪಸ್ಥಿತರಿದ್ದರು.