ವಿದ್ಯಾರ್ಥಿಗಳ ಬಹುಮುಖ ವ್ಯಕ್ತಿತ್ವ ವಿಕಾಸಕ್ಕೆ ಕರೆ
Call for all-round personality development of students
ಧಾರವಾಡ 04 : ಶಿಕ್ಷಕರು ಶಾಲಾ ತರಗತಿಗಳಲ್ಲಿ ಓದು, ಬರಹ, ಲೆಕ್ಕಾಚಾರ ಬೋಧಿಸುವ ಜೊತೆಗೆ ವಿದ್ಯಾರ್ಥಿಗಳ ಬಹುಮುಖ ವ್ಯಕ್ತಿತ್ವ ವಿಕಾಸಕ್ಕೆ ಆಸಕ್ತಿಯೊಂದಿಗೆ ಶ್ರಮಿಸಬೇಕೆಂದು ಲೇಖಕ ಬಿ.ಜಿ. ಗುತ್ತೆಪ್ಪನವರ ಕರೆ ನೀಡಿದರು. ಅವರು ಹತ್ತಿರದ ತಾಲೂಕಿನ ಕರಡಿಗುಡ್ಡ ಕರ್ನಾಟಕ ಪಬಿಕ್ ಸ್ಕೂಲ್ ಪ್ರಾಥಮಿಕ ವಿಭಾಗದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಹಾಡುಗಾರಿಕೆ, ರಂಗ ಅಭಿನಯ, ಬರವಣಿಗೆ, ಮಾತುಗಾರಿಕೆ ಮುಂತಾದ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯರಾಗಿ ಬೆಳವಣಿಗೆ ಹೊಂದಲು ಅಧ್ಯಾಪಕರ ಮಾರ್ಗದರ್ಶನ ಅತೀ ಅಗತ್ಯ ಎಂದರು.
ಕರಡಿಗುಡ್ಡ ಶ್ರೀಶಾಂತೇಶ್ವರಮಠದ ಚೆನ್ನಬಸಯ್ಯ ಹಿರೇಮಠ, ಗ್ರಾಮ ಪರಿವರ್ತನಾ ಟ್ರಸ್ಟ್ ಅಧ್ಯಕ್ಷ ಶಿವಣ್ಣ ಕುರಗುಂದ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ ಹೊಸೂರ, ಶಿವಶಂಕರ ಬಾಚಗುಂಡಿ, ನಾಗಪ್ಪ ಗಡ್ಡಿ, ಕರ್ನಾಟಕ ಪಬಿಕ್ ಸ್ಕೂಲ್ ಪ್ರಿನ್ಸಿಪಾಲ್ ಬಸವರಾಜ ಹಳ್ಳೂರ, ಉಪಪ್ರಚಾರ್ಯ ಉಮಾಕಾಂತ ಕರ್ಚಕಟ್ಟಿ, ಪಿಡಿಓ ತನ್ವೀರ ಸೇಠ, ಎಸ್‌ಡಿಎಂಸಿ ಸದಸ್ಯೆ ಕವಿತಾ ಕಲ್ಲಣ್ಣವರ, ಟಿಸಿಡಬ್ಲ್ಯೂ ಉಪನ್ಯಾಸಕ ಪ್ರಭಾಕರ ಲಗಮಣ್ಣವರ, ಸಿಆರ್‌ಪಿ ಎನ್.ಜಿ.ಗುರುಪುತ್ರನವರ, ಎಎಸ್‌ಐ ಮಂಜುನಾಥ ವಾಲೀಕಾರ, ಅಂಚೆ ಇಲಾಖೆಯ ವಿಠ್ಠಲ ತಡಸಿ, ಮುಖ್ಯಾಧ್ಯಾಪಕ ಬಿ.ಎಸ್.ತಳವಾರ, ಅಶೋಕ ಮಾತನಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 