ರಸ್ತೆ ಕಾಮಗಾರಿಗೆ ಸಿ ಎಸ್ ನಾಡಗೌಡ(ಅಪ್ಪಾಜಿ) ಭೂಮಿಪೂಜೆ

ರಸ್ತೆ ಕಾಮಗಾರಿಗೆ ಸಿ ಎಸ್ ನಾಡಗೌಡ(ಅಪ್ಪಾಜಿ) ಭೂಮಿಪೂಜೆ  CS Nad Gowda (Appaji) Bhumi Puja for road work

ಮುದ್ದೇಬಿಹಾಳ 23:  ಸರಕಾರದಲ್ಲಿ ದುಡ್ಡಿಲ್ಲ ಎಂದು ವಿರೋಧ ಪಕ್ಷದವರ ಬರಿ ಸುಳ್ಳು ಹೇಳುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೇ ಮತಕ್ಷೇತ್ರದಲ್ಲಿ ಸುಮಾರು ನೂರಾರು ಕೋಟಿಗಳ ವೆಚ್ಚದಲ್ಲಿ ಮತಕ್ಷೇತ್ರದಲ್ಲಿ ಪಟ್ಟಣ ಹಾಗೂ ಗ್ರಾಮೀಣ ರಸ್ತೆಗಳು, ನಿರಾವರಿ ಯೋಜನೆಗಳು, ಒಳಚಂರಡಿ ಯೋಜನೆ ಸೇರಿದಂತೆ ನೂರಾರು ಅಭಿವೃದ್ಧಿ ಪೂರಕ ಕೆಲಸಗಳನ್ನು ಕೈಗೊಳ್ಳಲಾಗಿದೆ, ಬಿಜೆಪಿಯವರ ಸುಳ್ಳು ಮಾತಗಳನ್ನು ಕೇಳದೇ ನಮ್ಮ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳ ಬಗ್ಗೆ  ಅರಿವು ಹೊಂದಿರಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು. 

ತಾಲೂಕಿನ ಹಿರೇಮುರಾಳದಲ್ಲಿ ಲೋಕೋಪಯೋಗಿ ಇಲಾಖೆ ಅಡಿಯಲ್ಲಿ  ಸುಮಾರು 13 ಕೋಟಿಗಳ ವೆಚ್ಚದಲ್ಲಿ ತಾಲೂಕಿನ ಹಿರೇಮೂರಾಳದಿಂದ ಹುನಕುಂಟಿ ಗ್ರಾಮಕ್ಕೆ ತೆರಳುವ ರಸ್ತೆ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. 

ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಖಜಾನೆ ಇಲಾಖೆಯ ಪರವಾನಿಗೆ ಒಪ್ಪಿಗೆ ಇಲ್ಲದೇ ಅವೈಜ್ಞಾನಿಕ ಕೆಲ ಕಾಮಗಾರಿಗಳನ್ನು ಕೈಗೊಂಡಿದ್ದರಿಂದ ಸಧ್ಯ 2.ಲಕ್ಷ 20 ಸಾವಿರ ಕೋಟಿ ರೂಗಳ ಹಣವನ್ನು ಯಾವೂದೇ ಗುತ್ತಿಗೆದಾರರಿಗಾಗಲಿ ಅಥವಾ ಇನ್ನಿತರ ಅಭಿವೃದ್ಧಿ ಬಳಸಂದತೆ ಬಾಕಿ ಉಳಿಸಿ ಹೋಗಿದೆ. ಇದರಿಂದ ಪ್ರಸ್ತುತ ರಾಜ್ಯದ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಸರಕಾರ ಬಿಜೆಪಿ ಬಿಟ್ಟು ಹೊಗಿರುವ ಅನುದಾನ ಹಣವನ್ನು ನಮ್ಮ ಸರಕಾರ ಭರಿಸುತ್ತಿದೆ. 

ಅದರಲ್ಲೂ ಕಮಲದಿನ್ನಿ, ಇಂಗಳಗೇರಿಯಿಂದ ಕೂಚಬಾಳ ರಸ್ತೆ, ಹಡಗಲಿ ಇಂದ ಅಮರಗೋಳದವ ಆರ್ ಡಿ ಪಿ ಆರ್ ಇಲಾಖೆಯಿಂದ 21 ಕೋಟಿ ವಿಚ್ಚದಲ್ಲಿ ರಸ್ತೆ ದುರಸ್ಥಿ ಹಾಗೂ ಹೋಸ ರಸ್ತೆಗಳ ನಿರ್ಮಾಣಕ್ಕೆ ಆದಷ್ಟು ಬೇಗ ಭೂಮಿ ಪೂಜೆ ನೆರವರಿಸಲಾಗುವುದು.ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯವರ ನೇತೃತ್ವದ ಕಾಂಗ್ರೇಸ್ ಪಂಚಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಉತ್ತಮ ಜನಪರ ಆಡಳಿತ ನಡೆಸುತ್ತಿದೆ. ಬಿಜೆಪಿಯವರಿಗೆ ನಮ್ಮ ಜನಪರ ಆಡಳಿತವನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. 

ಜತೆಗೆ ತಾಲೂಕಿನಲ್ಲಿ ಎರಡು ಪಶು ಚಿಕಿತ್ಸಾಲಯ ಆಸ್ಪತ್ರೆ ಈಗಾಗಲೇ ನಮ್ಮ ಸರಕಾರ ಮಂಜೂರಿ ಮಾಡಿ ಆಯಾ ಅದರಲ್ಲಿ ಬಿಜ್ಜೂರು ಗ್ರಾಮದಲ್ಲಿ ಪಶು ಆಸ್ಪತ್ರೆ ತೆರೆಯಲಾಗಿದೆ. ನಾಗರಬೇಟ್ಟ ಏತ ನೀರಾವರಿ ಕಾಮಗಾರಿ ಬಹುತೇಕ ಸಂಪೂರ್ಣ ಮುಗಿದ್ದು ಮುಂಬರುವ ದಿನಗಳಲ್ಲಿ ಆದಷ್ಟು ಬೇಗ ಲೋಕಾರೆ​‍್ಣಗೊಳಸಲಾಗುವುದು. ಜತೆಗೆ ಬೂದಿಹಾಳ ಪೀರಾಪೂರ ಯೋಜನೆಯನ್ನೂ ತೀವೃಗತಿಯಲ್ಲಿ ಪ್ರಾರಂಭಿಸುವ ಮೂಲಕ ಆ ಭಾಗದ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು. 

ಪಂಚ ಗ್ಯಾರಂಟಿ ಯೋಜನೆ ಸಮೀತಿಯ ತಾಲೂಕಾ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ,ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಕಾಂಗ್ರೇಸ್ ಮುಖಂಡ ಸಿ ಬಿ ಅಸ್ಕಿ,ಲೋಕೋಪಯೋಗಿ ಇಲಾಖೆ ಎಇಇ  ಎಸ್ ಜಿ ಶಿವನಗುತ್ತಿ, ಸಹಾಯಕ ಇಂಜಿನಿಯರ ಎ ಬಿ ರೆಡ್ಡಿ, ಶ್ರೀಶೈಲ ಮಲ್ಲಿಕಾರ್ಜುನ ದೇಶಮುಖ, ಅಮರೇಶ ಗೂಳಿ, ಶಾಂತಗೌಡ ನಾಡಗೌಡ,ಕಲ್ಲಣ್ಣ ಪ್ಯಾಟಿ, ಮಲ್ಲನಗೌಡ ಪಾಟೀಲ, ಶ್ರೀಶೈಲ ವಿಭೂತಿ, ಶ್ರೀಶೈಲ ಮೂರೋಳ, ರಾಜುಗೌಡ ಕೊಂಗಿ, ನಾಗಯ್ಯ ಹಾಲಗಂಗಾಧರಮಠ, ಮೈಬೂಬ ಮುಲ್ಲಾ ಸೇರಿದಂತೆ ಹಲವರು ಇದ್ದರು.