ಬಸ್ತಿ, ಮಾ 07, ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ಬೀಸುತ್ತಿರುವ ಬಲವಾದ ಗಾಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ. ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆ ಹಾಗೂ ಬಲವಾಗಿ ಬೀಸಿದ ಗಾಳಿಗೆ ಗೋಧಿ, ಅವರೆಕಾಳು, ಸಾಸಿವೆ ಮುಂತಾದ ಬೆಳೆಗಳಿಗೆ ಹಾನಿಯಾಗಿದೆ ಎನ್ನಲಾಗಿದೆ. ಕೇವಲ 15 ದಿನಗಳ ಹಿಂದಷ್ಟೇ ಗೋಧಿಯನ್ನು ಬಿತ್ತನೆ ಮಾಡಲಾಗಿತ್ತು. ಸಾಸಿವೆ ಬೆಳೆ ಹೂ ಬಿಟ್ಟಿತ್ತು. ಆದರೆ ಇವೆಲ್ಲ ಈಗ ಮಳೆನೀರಿನ ಪಾಲಾಗಿವೆ. ಇದಲ್ಲದೆ ಮಾವು ಬೆಳೆಯೂ ನಷ್ಟವಾಗಿದೆ. ಜೋರಾದ ಗಾಳಿಗೆ ಹೂ ಬಿಟ್ಟಿದ್ದ ಮಾವಿನ ಮರದ ಕೊಂಬೆಗಳು ಮುರಿದಿದ್ದು, ರೈತರು ಕಂಗಾಲಾಗಿದ್ದಾರೆ.