ನವದೆಹಲಿ, ಏ 18,ಪೂರ್ವ ನಿಗದಿಯಂತೆ ಮುಂಬರುವ ಸೆಪ್ಟೆಂಬರ್ ನಲ್ಲಿ ಟಿ20 ಲೀಗ್ ನಡೆಯಲಿದೆ ಎಂದು ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೀಟ್ ರಸೆಲ್ ನಿರೀಕ್ಷಿಸಿದ್ದಾರೆ. ಹಾಗೆಯೇ ಕೊರೊನಾ ವೈರಸ್ ನಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿರುವ ಐಪಿಎಲ್ ಕುರಿತು ಬಿಸಿಸಿಐ ತನ್ನದೇ ಆದ ವಿಂಡೋ(ಪರ್ಯಾಯ ಮಾರ್ಗ) ವನ್ನು ಕಲ್ಪಿಸಲಿದೆ ಎಂದು ಆಶಿಸಿದ್ದಾರೆ.ಕೋವಿಡ್ -19ನಿಂದಾಗಿ ಐಪಿಎಲ್ 13ನೇ ಆವೃತ್ತಿ ಅಮಾನತುಗೊಂಡಿರುವ ಕಾರಣ ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ಚಿಂತಿಸುತ್ತಿದೆ. ಇದಕ್ಕಾಗಿ ಏಷ್ಯಾ ಕಪ್ ಮತ್ತು ಟಿ20 ವಿಶ್ವ ಕಪ್ ವೇಳಾಪಟ್ಟಿಯಲ್ಲಿಯೂ ಬದಲಾವಣೆ ತರಬೇಕಿದೆ. ಆಗಸ್ಟ್ 19ರಿಂದ ಸೆಪ್ಟೆಂಬರ್ 26ರವರೆಗೆ ನಿಗದಿಯಾಗಿರುವ ಸಿಪಿಎಲ್ ಐಪಿಎಲ್ ವೇಳಾಪಟ್ಟಿಗೆ ತಾಕಲಾಟ ಉಂಟು ಮಾಡಬಹುದಾಗಿದೆ. ಹೀಗಾಗಿ ಈ ಕುರಿತು ಕ್ರಿಕ್ ಇನ್ಫೋ ಜತೆ ಪ್ರತಿಕ್ರಿಯಿಸಿರುವ ಸಿಪಿಎಲ್ ಸಿಇಒ, ಇದರ ವಿರುದ್ಧ ನಾವು ಹೋಗುವುದಿಲ್ಲ. ಇದೇ ವೇಳೆ ಈ ಕುರಿತು ನಿರ್ಧಾರ ಕೈಗೊಳ್ಳಲು ಬಿಸಿಸಿಐ ಎಲ್ಲ ರೀತಿಯಲ್ಲೂ ಸರ್ವಶಕ್ತವಾಗಿದೆ ಎಂದು ನನಗೆ ತಿಳಿದಿದ್ದರೂ ಸ್ವಲ್ಪ ಸಂವೇದನಾಶೀಲರಾಗಿರಬೇಕು, ಆಟಗಾರರು ಹಾಗೂ ಇತರ ಲೀಗ್ ಗಳು ಏನೂ ಮಾಡುತ್ತಿವೆ ಎಂಬುದನ್ನು ಪರಿಗಣಿಸಬೇಕು, ಎಂದು ರಸೆಲ್ ಹೇಳಿದ್ದಾರೆ.