ಕೊರೊನಾವೈರಸ್: ಚೀನಾದ ಹುಬೈ ಪ್ರಾಂತ್ಯದಲ್ಲಿ 1,696 ಮಂದಿ ಸಾವು

ಟೋಕಿಯೊ, ಫೆ.17, ಚೀನಾದ ಪ್ರಾಂತ್ಯದ ಹುಬೈನಲ್ಲಿ 1,696 ಜನರು ಮಾರಣಾಂತಿಕ ಕರೋನವೈರಸ್ ಕಾಯಿಲೆಯಿಂದ ಮೃತಪಟ್ಟಿರುವುದಾಗಿ ಪ್ರಾಂತೀಯ ಆರೋಗ್ಯ ಆಯೋಗ ಸೋಮವಾರ ತಿಳಿಸಿದೆ.  ಹುಬೈನಲ್ಲಿ ಭಾನುವಾರ 1,933 ಹೊಸ ಕರೋನ ಪ್ರಕರಣಗಳು ದೃಢಪಟ್ಟಿದ್ದು, ಮತ್ತೆ 100 ಜನ ಸಾವನ್ನಪ್ಪಿರುವುದಾಗಿ ಆಯೋಗ ವರದಿ ಮಾಡಿದೆ. ಪ್ರಾಂತ್ಯದಲ್ಲಿ 58,182 ಮಂದಿ ಮಾರಣಾಂತಿಕ ವೈರಸ್ನಿಂದ ಬಳಲುತ್ತಿದ್ದು, ಹುಬೈನ ರಾಜಧಾನಿಯಾದ ವುಹಾನ್ ನಲ್ಲಿ ಮತ್ತೆ ಒಟ್ಟು 41,152  ಪ್ರಕರಣಗಳು ದೃಢಪಡಿಸಿರುವುದಾಗಿ ಆಯೋಗ ದಾಖಲಿಸಿದೆ. ಹುಬೈನಲ್ಲಿ 1,016 ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದು, ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಈ ಪ್ರಾಂತ್ಯದಲ್ಲಿ ಬಿಡುಗಡೆಯಾದ ಒಟ್ಟು ರೋಗಿಗಳ ಸಂಖ್ಯೆ 6,639 ಕ್ಕೆ ತಲುಪಿದೆ. ಆಸ್ಪತ್ರೆಯಲ್ಲಿ ದಾಖಲಾದ ಒಟ್ಟು 40,814 ಮಂದಿ  ರೋಗಿಗಳಲ್ಲಿ 8,024 ಮಂದಿ ಸುಧಾರಣಾ ಸ್ಥಿತಿಯಲ್ಲಿದ್ದರೆ, ಇನ್ನೂ 1,773 ಮಂದಿ ಗಂಭೀರ ಸ್ಥಿತಿ ಎದುರಿಸುತ್ತಿದ್ದಾರೆ ಎಂದು ಇತ್ತೀಚಿನ ವರದಿ ತಿಳಿಸಿದೆ.  ಕಳೆದ ಡಿಸೆಂಬರ್ ತಿಂಗಳಿನಲ್ಲಿ ಹುಬೈ ಪ್ರಾಂತ್ಯದ ರಾಜಧಾನಿ ವುಹಾನ್ ನಗರದಲ್ಲಿ ವೈರಸ್ ಹರಡುವುದು ಪ್ರಾರಂಭವಾಯಿತು. 

ಕೊರೊನಾವೈರಸ್ ಮಾರಣಾಂತಿಕಾ ವೈರಸ್ ಗಳಲ್ಲೇ ಹೆಚ್ಚು ಅಪಾಯಕಾರಿಯಾಗಿದ್ದು ಪ್ರಾರಂಭದಲ್ಲಿ  ನೆಗಡಿಯಿಂದ ಶುರುವಾಗಿ ಹೆಚ್ಚು ತೀವ್ರವಾದ ಕಾಯಿಲೆಗಳವರೆಗೆ ಅನಾರೋಗ್ಯವನ್ನು ಉಂಟುಮಾಡುತ್ತದೆ. ವೈರಸ್ ಸೋಂಕಿತರೊಂದಿಗಿನ ನೇರ ಸಂಪರ್ಕದ ಮೂಲಕ ಮಾತ್ರ ಈ ವೈರಸ್ ಹರಡುತ್ತದೆ ಎಂದು ಮೊದಲು ಭಾವಿಸಲಾಗಿತ್ತು.  ಆದರೆ ಜನರಲ್ಲಿ ಸೋಂಕು ಎಷ್ಟು ಸುಲಭವಾಗಿ ಹರಡಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ ಇದನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಬೇಗ ಹರಡುವುದು ದೃಢಪಟ್ಟಿದೆ. ಸೋಂಕಿನ ಸಾಮಾನ್ಯ ಚಿಹ್ನೆಗಳೆಂದರೆ ಉಸಿರಾಟದ ಲಕ್ಷಣಗಳು, ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಗಳು. ಹೆಚ್ಚು ತೀವ್ರವಾದ ಸಂದರ್ಭಗಳಲ್ಲಿ, ಪ್ರಾರಂಭದಲ್ಲಿ ನ್ಯುಮೋನಿಯಾ ನಂತರ ತೀವ್ರವಾದ ಉಸಿರಾಟದ ತೊಂದರೆಯಿಂದ ಸಿಂಡ್ರೋಮ್, ಮೂತ್ರಪಿಂಡದ ವೈಫಲ್ಯವಾಗಿ ನಂತರ ವ್ಯಕ್ತಿಯ ಸಾವಿಗೆ ಕಾರಣವಾಗಬಹುದು. ಸೋಂಕಿನಿಂದ ಬಳಲುತ್ತಿರುವವರಿಂದ ಆದಷ್ಟೂ ದೂರವಿರುವುದು, ನಿಯಮಿತವಾಗಿ ಕೈ ತೊಳೆಯುವುದು, ಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು ಮತ್ತು ಕೆಮ್ಮು ಮತ್ತು ಸೀನುವಿಕೆಯಂತಹ ಉಸಿರಾಟದ ಕಾಯಿಲೆಯ ಲಕ್ಷಣಗಳನ್ನು ಹೊಂದಿರುವವರಿಂದ ದೂರವಿರುವುದು ಇವುಗಳಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು.  ಯುಎನ್ಐ ಡಿಸಿ