ವುಹಾನ್, ಮಾರ್ಚ್ 12 (ಕ್ಸಿನ್ಹುವಾ)- ಮಾರಕ ಕೊರೊನಾವೈರಸ್ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಚೀನಾದ ಮಧ್ಯ ಭಾಗದ ಹುಬೈ ಪ್ರಾಂತ್ಯದಲ್ಲಿ ಕೊರೊನಾವೈರಸ್ (ಕೊವಿದ್ -19)ನ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಬುಧವಾರ ಎಂಟು ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಸ್ಥಳೀಯ ಆರೋಗ್ಯ ಆಯೋಗ ಗುರುವಾರ ತಿಳಿಸಿದೆ.ಹೊಸದಾಗಿ ದೃಢಪಟ್ಟ ಎಲ್ಲ ಪ್ರಕರಣಗಳು ಪ್ರಾಂತೀಯ ರಾಜಧಾನಿ ಮತ್ತು ಸೋಂಕಿನ ಕೇಂದ್ರಬಿಂದುವಾಗಿರುವ ವುಹಾನ್ನಲ್ಲಿ ವರದಿಯಾಗಿವೆ. ಬುಧವಾರ ಹುಬೈ ಪ್ರಾಂತ್ಯದಲ್ಲಿ ಸಂಭವಿಸಿದ 10 ಸಾವುಗಳ ಪೈಕಿ ಏಳು ಮಂದಿ ಏಳು ವುಹಾನ್ನಲ್ಲಿ ಸಾವನ್ನಪ್ಪಿದ್ದಾರೆ.ಸೋಂಕು ಪೀಡಿತ ಹುಬೈ ಪ್ರಾಂತ್ಯದಲ್ಲಿ ದೃಢಪಟ್ಟ ಕೊವಿದ್-19ನ ಪ್ರಕರಣಗಳ ಸಂಖ್ಯೆ 67,781 ಕ್ಕೆ ಏರಿದೆ. ಬುಧವಾರದ ವೇಳೆಗೆ ಹುಬೈ ಪ್ರಾಂತ್ಯದ 16 ನಗರಗಳು ಮತ್ತು ವುಹಾನ್ ಹೊರಗಿನ ಪ್ರದೇಶಗಳಲ್ಲಿ ಸತತ ಏಳು ದಿನಗಳವರೆಗೆ ಹೊಸ ದೃಢಪಟ್ಟ ಪ್ರಕರಣಗಳು ವರದಿಯಾಗಿಲ್ಲ. ಬುಧವಾರದ ವೇಳೆಗೆ ವುಹಾನ್ ನಲ್ಲಿ 49,986 ದೃಢಪಟ್ಟ ಪ್ರಕರಣಗಳು ಮತ್ತು 2,430 ಸಾವುಗಳು ವರದಿಯಾಗಿವೆ. ಬುಧವಾರ ಚೇತರಿಸಿಕೊಂಡ ನಂತರ 1,242 ರೋಗಿಗಳನ್ನು ಆಸ್ಪತ್ರೆಯಿಂದ ಮನೆಗಳಿಗೆ ಕಳುಹಿಸಲಾಗಿದ್ದು, ಈ ಪ್ರಾಂತ್ಯದಲ್ಲಿ ಆಸ್ಪತ್ರೆಯಿಂದ ನಿರ್ಗಮಿಸಿದವರ ಒಟ್ಟು ರೋಗಿಗಳ ಸಂಖ್ಯೆ 50,298 ಕ್ಕೆ ತಲುಪಿದೆ ಎಂದು ಆಯೋಗ ತಿಳಿಸಿದೆ.ಆಸ್ಪತ್ರೆಗೆ ದಾಖಲಾದ 12,769 ರೋಗಿಗಳ ಪೈಕಿ 3,453 ಮಂದಿ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದರೆ, ಇನ್ನೂ 727 ಮಂದಿ ತುಂಬಾ ಗಂಭೀರ ಸ್ಥಿತಿಯಲ್ಲಿದ್ದಾರೆ. ಹುಬೈನಲ್ಲಿ 158 ಶಂಕಿತ ಪ್ರಕರಣಗಳು ವರದಿಯಾಗಿವೆ ಎಂದು ಆಯೋಗ ಹೇಳಿದೆ.