ಸಿರೋ, ಫೆಬ್ರವರಿ 15,ವಿಶ್ವವನ್ನೆ ಬೆಚ್ಚಿಬೀಳಿಸಿರುವ ಕರೋನ ಸೋಂಕು ಈಜಿಪ್ಟ್ಗೂ ವ್ಯಾಪಿಸಿದ್ದು, ಅಲ್ಲಿ ಸೋಂಕಿನ ಮೊದಲ ಪ್ರಕರಣ ದೃಡಪಟ್ಟಿದೆ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿದೆ. ವಿದೇಶಿ ವ್ಯಕ್ತಿ ಗೆ ಕರೋನವೈರಸ್ ಧನಾತ್ಮಕ ಪರೀಕ್ಷೆ ಮಾಡಿಸಲಾಗಿದೆ ಪ್ರಕರಣವು ಸ್ಥಿರವಾಗಿದೆ ಎಂದು ಆರೋಗ್ಯ ಸಚಿವಾಲಯದ ವಕ್ತಾರ ಖಲೀದ್ ಮುಜಾಹಿದ್ ತಿಳಿಸಿದ್ದಾರೆ.ಆದರೂ ವಕ್ತಾರರು ಪ್ರಕರಣದ ರೋಗಿಯ ರಾಷ್ಟ್ರೀಯತೆಯನ್ನು ಗುರುತಿಸಿಲ್ಲ .
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಗೆ ತಕ್ಷಣ ಮಾಹಿತಿ ನೀಡಲಾಗಿದ್ದು, ಡಬ್ಲ್ಯುಎಚ್ಒ ಸಹಕಾರದೊಂದಿಗೆ ಮುನ್ನಚ್ಚರಿಕೆ ಕ್ರಮವಾಗಿ ಸೋಂಕು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದೂ ಮುಜಾಹಿದ್ ಹೇಳಿದ್ದಾರೆ.ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು 14 ದಿನಗಳ ಸಂಪರ್ಕತಡೆಗಾಗಿ ನಿವಾಸಗಳಲ್ಲಿ ಇರಿಸಲಾಗುವುದು ಎಂದೂ ವಕ್ತಾರರು ಹೇಳಿದ್ದು, ವೈದ್ಯಕೀಯ ತಂಡಗಳು ಪ್ರತಿ ಎಂಟು ಗಂಟೆಗಳಿಗೊಮ್ಮೆ ಅವರನ್ನು ಪರೀಕ್ಷಿಸಲಿವೆ ಎಂದರು. ಸಾಂಕ್ರಾಮಿಕ ರೋಗ ಹರಡಿದಾಗಿನಿಂದ, ಈಜಿಪ್ಟ್ ಒಂದು ಸಮಗ್ರ ಯೋಜನೆಯನ್ನು ಅಳವಡಿಸಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ .