ವಾಷಿಂಗ್ಟನ್ ನಲ್ಲಿ ಕೊರೊನಾಗೆ 24 ಬಲಿ ವಾಷಿಂಗ್ಟನ್,

ಮಾ 11 (ಸ್ಫುಟ್ನಿಕ್) ವಾಷಿಂಗ್ಟನ್ ನಲ್ಲಿ ಕೊರೊನಾ ಸೋಂಕಿಗೆ 24 ಜನರು ಬಲಿಯಾಗಿದ್ದು ಅಮೆರಿಕದಲ್ಲಿ ಒಟ್ಟು 29 ಜನರು ಈ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಅಲ್ಲಿನ  ಆರೋಗ್ಯ ಪ್ರಾಧಿಕಾರ ದೃಢಪಡಿಸಿದೆ.   ಜನವರಿ 10 ರಂದು ಈ ಸೋಂಕು ವಾಷಿಂಗ್ಟನ್ ನಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಸುಮಾರು 267 ಜನರಿಗೆ ಈ ಸೋಂಕು ತಗುಲಿದೆ ಎಂದು ಪ್ರಾಧಿಕಾರದ ಹೇಳಿಕೆ ತಿಳಿಸಿದೆ.  ಕಿಂಗ್ ಕೌಂಟಿಯಲ್ಲಿ ಈ ಸೋಂಕಿಗೆ 22 ಜನರು ಬಲಿಯಾಗಿದ್ದು 190 ಪ್ರಕರಣಗಳೂ ದೃಢಪಟ್ಟಿವೆ. ಅಮೆರಿಕದಲ್ಲಿ 900 ಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ಮೂಲಗಳು ತಿಳಿಸಿವೆ.