ಭೂತಾನ್ನ ಮಾರ್ಚ್ 6, ದೇಶದಲ್ಲಿ ಕೊವಿದ್-19(ಕೊರೊನವೈರಸ್) ನ ಪ್ರಕರಣವೊಂದು ದೃಢಪಟ್ಟಿದೆ ಎಂದು ಭೂತಾನ್ ಪ್ರಧಾನ ಮಂತ್ರಿ ಲೋಟೆ ಶೆರಿಂಗ್ ಶುಕ್ರವಾರ ಬೆಳಿಗ್ಗೆ ಪ್ರಕಟಿಸಿದ್ದಾರೆ..‘ಮಾರ್ಚ್ 5 ರಂದು ಸ್ಥಳೀಯ ಕಾಲಮಾನ ರಾತ್ರಿ 11:00 ಗಂಟೆಗೆ ಕೊವಿದ್-19 ನ ಒಂದು ಪ್ರಕರಣ ದೃಢಪಟ್ಟಿದೆ ಸಾರ್ವಜನಿಕರಿಗೆ ತಿಳಿಸಲು ಬಯಸುತ್ತೇವೆ.’ ಎಂದು ಪ್ರಧಾನಿ ಹೇಳಿದ್ದಾರೆ.76 ವರ್ಷದ ಅಮೆರಿಕ ಪ್ರವಾಸಿ ರೋಗಿಯು ಸೋಮವಾರ ದೇಶಕ್ಕೆ ಆಗಮಿಸಿದ್ದಾನೆ. ಆತ ಭಾರತದ ಗುವಾಹತಿ ಮೂಲಕ ಭೂತಾನ್ ಗೆ ಬಂದಿದ್ದಾನೆ..ಭೂತಾನ್ನ ಆರೋಗ್ಯ ಸಚಿವಾಲಯದ ಪ್ರಕಾರ, ರೋಗಿಯು ಫೆ 21 ರಿಂದ ಮಾರ್ಚ್ 1 ರವರೆಗೆ ಭಾರತದಲ್ಲಿ ಪ್ರವಾಸ ಮಾಡಿದ್ದಾನೆ. ಫೆ 18 ರಂದು ವಾಷಿಂಗ್ಟನ್ ಡಿ.ಸಿ.ಯಿಂದ ಆತ ಪ್ರಯಾಣ ಬೆಳೆಸಿದ್ದ. ರೋಗಿಯೊಂದಿಗೆ 59 ವರ್ಷ ವಯಸ್ಸಿನ ತನ್ನ ಸಂಗಾತಿಯೊಂದಿಗೆ ಪ್ರಯಾಣಿಸಿದ್ದಾನೆ. ಭೂತಾನ್ ಗೆ ಆತ ಆಗಮಿಸುವ ವೇಳೆ 10 ಪ್ರಯಾಣಿಕರಿದ್ದರು. ಈ ಪೈಕಿ ಎಂಟು ಮಂದಿ ಭಾರತೀಯರು ಸೇರಿದ್ದಾರೆ. ಆತನ ಆರೋಗ್ಯ ಪರೀಕ್ಷೆಯನ್ನು ವಿಮಾನ ನಿಲ್ದಾಣದಲ್ಲಿ ನಡೆಸಲಾಯಿತಾದರೂ, ಸೋಂಕಿನ ಯಾವುದೇ ಲಕ್ಷಣಗಳು ಪತ್ತೆಯಾಗಿರಲಿಲ್ಲ. ಆದರೂ, ತಿಂಪು ತಲುಪಿದಾಗ ಆತ ಮಧ್ಯಾಹ್ನ 3:00 ಗಂಟೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದಾನೆ. ಉಬ್ಬಿರುವ ಹೊಟ್ಟೆ (ಡಿಸ್ಪೆಪ್ಟಿಕ್ ಲಕ್ಷಣಗಳು) ಮತ್ತು ವಾಕರಿಕೆ ಬಗ್ಗೆ ರೋಗಿ ವೈದ್ಯರಲ್ಲಿ ತೋಡಿಕೊಂಡಿದ್ದಾನೆ. ಆತ ದೀರ್ಘಕಾಲದ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾನೆ. ಬಳಿಕ ಆತ ಚಿಕಿತ್ಸೆ ಪಡೆದು ದೇಶದ ಇತರ ಸ್ಥಳಗಳಲ್ಲಿ ಪ್ರವಾಸ ಮಾಡಿದ್ದಾನೆ. ಮತ್ತೆ ತಿಂಪುವಿನಲ್ಲಿ ಆಸ್ಪತ್ರೆಗೆ ದಾಖಲಾದಾಗ ರೋಗ ದೃಢಪಟ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.ರೋಗಿ ಸುತ್ತಾಡಿದ ತಿಂಪು, ಪರೋ ಮತ್ತು ಪುನಾಖಾ ಎಂಬ ಮೂರು ಜಿಲ್ಲೆಗಳಲ್ಲಿನ ಶಾಲೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಮೂರು ವಾರಗಳವರೆಗೆ ಮುಚ್ಚಲಾಗಿದೆ ಎಂದು ಪ್ರಕಟಿಸಲಾಗಿದೆ.