ಕೊರೊನಾ ಸೋಂಕು : ವಾಷಿಂಗ್ಟನ್ ನಲ್ಲಿ ಸಾವಿನ ಸಂಖ್ಯೆ 6 ಕ್ಕೆ ಏರಿಕೆ
ಕೊರೊನಾ ಸೋಂಕು : ವಾಷಿಂಗ್ಟನ್ ನಲ್ಲಿ ಸಾವಿನ ಸಂಖ್ಯೆ 6 ಕ್ಕೆ ಏರಿಕೆ CORONA : 6 DIE IN WASHINGTON
Lokadrshan Daily
1/5/25, 6:56 AM ಪ್ರಕಟಿಸಲಾಗಿದೆ
ವಾಷಿಂಗ್ಟನ್, ಮಾ 3, ಅಮೆರಿಕದ ವಾಷಿಂಗ್ಟನ್ ನಲ್ಲಿ ಇನ್ನೂ ನಾಲ್ವರು ಕೊರೊನಾ ಸೋಂಕಿಗೆ ಬಲಿಯಾಗಿದ್ದು ಸೋಮವಾರದವರೆಗೆ ಈ ಸೋಂಕಿನಿಂದ ಒಟ್ಟು ಆರು ಜನರು ಸಾವನ್ನಪ್ಪಿದ್ದಾರೆ. ಸೋಮವಾರ ನಾಲ್ಕು ಹೊಸ ಪ್ರಕರಣಗಳು ದಾಖಲಾಗಿದ್ದು ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಈ ಹಿಂದೆ ಸೋಂಕು ದೃಢಪಟ್ಟ ಪ್ರಕರಣದ ವ್ಯಕ್ತಿ ಸೋಮವಾರ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯಾಧಿಕಾರಿ ಡಾ.ಜೆಫ್ರಿ ಡುಚಿನ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ವಾಷಿಂಗ್ಟನ್ ನಲ್ಲಿ ಕನಿಷ್ಠ 18 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಈ ಸೋಂಕಿಗೆ 6 ಜನ ಬಲಿಯಾಗಿದ್ದಾರೆ ಎಂದು ಅಲ್ಲಿನ ಆರೋಗ್ಯಾಧಿಕಾರಿ ಡಾ. ಕಥಿ ಲೋಫಿ ತಿಳಿಸಿದ್ದಾರೆ.