ಕೊರೊನಾ ಸೋಂಕು : ಚೀನಾದ ಹುಬೈ ಪ್ರಾಂತ್ಯದಲ್ಲಿ ಸಾವಿನ ಸಂಖ್ಯೆ 2004 ಕ್ಕೆ ಏರಿಕೆ

ವುಹಾನ್, ಫೆ 19  ಚೀನಾದ ಹುಬೈ ಪ್ರಾಂತ್ಯದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ವೈರಾಣು ಸೋಂಕಿಗೆ 2004 ಜನರು ಬಲಿಯಾಗಿದ್ದು ಕಳೆದ 24 ಗಂಟೆಗಳಲ್ಲಿ ಸಾವಿನ ಸಂಖ್ಯೆ 136 ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಸೋಂಕಿತರ ಸಂಖ್ಯೆ ಕಳೆದೊಂದು ದಿನದಲ್ಲಿ 1749 ರಷ್ಟು ಹೆಚ್ಚಾಗಿದ್ದು ಒಟ್ಟು 74185 ಜನರಿಗೆ ಸೋಂಕು ತಗುಲಿದೆ. ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಕಳೆದೊಂದು ದಿನದಲ್ಲಿ 1824 ರಷ್ಟಿದ್ದು ಒಟ್ಟು 14376 ಜನರು ಗುಣಮುಖರಾಗಿದ್ದಾರೆ.   ಡಿಸೆಂಬರ್ ಅಂತ್ಯದ ವೇಳೆಗೆ ಕೊರೊನಾ ವೈರಾಣು ಸೋಂಕು ಮೊದಲ ಬಾರಿಗೆ ಚೀನಾದ ವುಹಾನ್ ನಲ್ಲಿ ಕಾಣಿಸಿಕೊಂಡಿತು. ಇದೀಗ 20 ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ. ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯು ಎಚ್ ಒ ಜಾಗತಿಕ ಆರೋಗ್ಯ ತುತರ್ು ಪರಿಸ್ಥಿತಿ ಘೋಷಿಸಿದೆ.