ಬೀಜಿಂಗ್, ಮಾರ್ಚ್ 11 :ಚೀನಾದಲ್ಲಿ ಕರೋನವೈರಸ್ ಮಹಾಮಾರಿ ಸೋಂಕಿನ ಪ್ರಕರಣಗಳ ಸಂಖ್ಯೆ 80,770 ಮೀರಿದ್ದು, ಸಾವಿನ ಸಂಖ್ಯೆ 3,158ಕ್ಕೆ ತಲುಪಿದೆ. 61,000 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ರಾಜ್ಯ ಆರೋಗ್ಯ ಸಮಿತಿ ಬುಧವಾರ ತಿಳಿಸಿದೆ.ರಾಜ್ಯ ಆರೋಗ್ಯ ಸಮಿತಿಯು ಚೀನಾದ 31 ಪ್ರಾಂತ್ಯಗಳಿಂದ ಒಟ್ಟು 80,778 ಕರೋನವೈರಸ್ ಸೋಂಕಿನ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದಿದೆ. ಇದರಲ್ಲಿ ಪ್ರಸ್ತುತ 16,145 ಜನರು ಅನಾರೋಗ್ಯದಿಂದ ಬಳಲುತ್ತಿದ್ದು, 4,492 ಜನರ ಸ್ಥಿತಿ ಗಂಭೀರವಾಗಿದೆ. 61,475 ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಇಲ್ಲಿಯವರೆಗೆ 3,158 ಮಂದಿ ಸಾವನ್ನಪ್ಪಿದ್ದಾರೆ ಎಂದು ಸಮಿತಿ ತಿಳಿಸಿದೆಯುಎನ್ಐ ಡಿಸಿ ವಿಎನ್