ಯುನೈಟೆಡ್ ನೇಷನ್ಸ್, ಮಾರ್ಚ್ 13: ಕರೋನ ಸೋಂಕು ಬಡವ, ಬಲ್ಲಿದ ಸಿರಿವಂತ ದೇಶ, ಬಡತನ ದೇಶ ಎಂಬ ತಾರತಮ್ಯವಿಲ್ಲದೆ ಎಲ್ಲರನ್ನು ಅವರಿಸಿಕೊಳ್ಳುತ್ತಿದೆ. ಈಗ ಮಾರ ಸೋಂಕು ವಿಶ್ವಸಂಸ್ಥೆಯನ್ನು ಬಿಡೆದೆ ಆವರಿಸಿಕೊಂಡಿದೆ. ಫಿಲಿಪೈನ್ಸ್ನ ಶಾಶ್ವತ ಕಾರ್ಯಾಚರಣೆಯಿಂದ ವಿಶ್ವಸಂಸ್ಥೆಯ ಪ್ರತಿನಿಧಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಪರೀಕ್ಷೆಯಿಂದ ಇದು ದೃಡಪಟ್ಟಿದೆ. ಇದು ನ್ಯೂಯಾರ್ಕ್ನ ಕೇಂದ್ರ ಕಚೇರಿಯಲ್ಲಿ ಅವರಿಸಿದ ಮೊದಲ ಕೋವಿಡ್ ಪ್ರಕರಣವಾಗಿದೆ. ವಿಶ್ವಸಂಸ್ಥೆ ಇದು ದು ಸಾಂಕ್ರಾಮಿಕ ಜಾಡ್ಯ ಎಂದುಘೋಷಣೆ ಮಾಡಿದ ಕೆಲವೆ ಗಂಟೆಗಳ ಅವಧಿ ನಂತರ ವರದಿಯಾದ ಮೊದಲ ಪ್ರಕರಣವಾಗಿದೆ ಎಂದು ಯುಎನ್ ವಕ್ತಾರರು ಗುರುವಾರ ತಿಳಿಸಿದ್ದಾರೆ.ಈ ನಡುವೆ ಕೆನಾಡಾ ಪ್ರಧಾನಿ ಟ್ರುದೇವ್ ಅವರ ಪತ್ನಿಗೂ ಕರೋನಾ ಸೋಂಕು ತಗುಲಿರುವುದು ಪರೀಕ್ಷೆಯಿಂದ ರುಜುವಾತುಗೊಂಡಿದೆ. ಅಮೆರಿಕ ಕೆಲವು ಸಂಸದರಿಗೂ ಇದು ಹಬ್ಬಿದೆ ಜಗತ್ತಿನ 60 ದೇಶಗಳಿಗೂ ಇದು ವ್ಯಾಪಿಸಿದ್ದು ಕೋಟಿ ಕೋಟಿ ವ್ಯಾಪಾರ ವಹಿವಾಟು ನಷ್ಟಕ್ಕೂ ಕಾರಣವಾಗಿದೆ.