ಜಪಾನ್ನಲ್ಲಿ 568 ಜನರಿಗೆ ಕೊವಿದ್-19 ಸೋಂಕು: ಸಾವಿನ ಸಂಖ್ಯೆ 31 ಕ್ಕೆ ಏರಿಕೆಟೋಕಿಯೊ,

Xಕಏರಿಕೆಟೋಕಿಯೊ, ಮಾರ್ಚ್ 11:) ಜಪಾನ್ನಲ್ಲಿ ಮಂಗಳವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 10.30 ರ ವೇಳೆಗೆ ಕೊವಿದ್-19 ಸೋಂಕಿತರ ಸಂಖ್ಯೆ 568ಕ್ಕೆ ಏರಿದೆ ಎಂದು  ಅಲ್ಲಿನ ಆರೋಗ್ಯ ಸಚಿವಾಲಯ ಮತ್ತು ಸ್ಥಳೀಯ ಸರ್ಕಾರಗಳು ತಿಳಿಸಿವೆ.    ಜಪಾನ್ನಲ್ಲಿ 568 ದೃಢಪಟ್ಟಿರುವ ಪ್ರಕರಣಗಳಲ್ಲಿ, ಯೊಕೊಹಾಮಾದಲ್ಲಿ ನಿರ್ಬಂಧಿಸಲಾಗಿರುವ ವೈರಸ್ ಪೀಡಿತ ಡೈಮಂಡ್ ಪ್ರಿನ್ಸೆಸ್ ಕ್ರೂಸ್ ಹಡಗಿನಲ್ಲಿ ಪತ್ತೆಯಾದ ಪ್ರಕರಣಗಳು ಸೇರಿಲ್ಲ. ಹೆಚ್ಚಿನ ಪ್ರಕರಣಗಳು ಜಪಾನ್ನ ಉತ್ತರದ ತುದಿಯ ಹೊಕ್ಕೈಡೋದಲ್ಲಿ ಪತ್ತೆಯಾಗಿವೆ. ಇಲ್ಲಿ 111 ಪ್ರಕರಣಗಳು ಪತ್ತೆಯಾಗಿದ್ದು, ಪರಿಸ್ಥಿತಿಯ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.ಮಾರಕ ವೈರಸ್ನಿಂದ ಜಪಾನ್ನಲ್ಲಿ ಸಾವನ್ನಪ್ಪಿದವರ ಸಂಖ್ಯೆ 31ಕ್ಕೇರಿದೆ. ಇದರಲ್ಲಿ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಸೋಂಕು ತಗುಲಿ ಮೃತಪಟ್ಟವರೂ ಸೇರಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.ಆರೋಗ್ಯ ಸಚಿವಾಲಯ ಮತ್ತು ಸ್ಥಳೀಯ ಅಧಿಕಾರಿಗಳ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಐಚಿಯಲ್ಲಿ  99, ಒಸಾಕಾದಲ್ಲಿ 73, ಟೋಕಿಯೊದಲ್ಲಿ 67, ಕನಗಾವಾ 43 ಹಾಗೂ ಹ್ಯೋಗೊನಲ್ಲಿ 25 ಕೊವಿದ್-19 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಆರೋಗ್ಯ ಸಚಿವಾಲಯ ಸದ್ಯ 31 ರೋಗಿಗಳನ್ನು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆಂದು ಪರಿಗಣಿಸಿ ತೀವ್ರ ನಿಗಾ ಘಟಕಗಳಿಗೆ ದಾಖಲಿಸಿದೆ.
ಯುಎನ್ಐ ಎಸ್ಎಲ್ಎಸ್ 1012          NNNN-------------------------------------------------------------------------------------------------ZCZCNormalKPAR 1ADJOURNED RS
ವಿವಿಧ ವಿಚಾರಗಳಿಗಾಗಿ ವಿಪಕ್ಷಗಳ ಗದ್ದಲ: ಕಲಾಪ ಮುಂದೂಡಿಕೆ  ನವದೆಹಲಿ,
 ಮಾ 11 (ಯುಎನ್ಐ) ಹೋಳಿ ಹಬ್ಬದ ಬಿಡುವಿನ ಬಳಿಕ ಸಂಸತ್ ಕಲಾಪ ಪುನಾರಂಭಗೊಂಡಿದ್ದು, ರಾಜ್ಯಸಭೆಯಲ್ಲಿ ವಿಪಕ್ಷಗಳ ಗದ್ದಲದ ಕಾರಣ ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲ್ಪಟ್ಟಿದೆ  ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಸಭಾಧ್ಯಕ್ಷ ಎಂ. ವೆಂಕಯ್ಯನಾಯ್ಡು, ದೆಹಲಿ ಹಿಂಸಾಚಾರದ ಲೋಕಸಭೆಯಲ್ಲಿ ಇಂದು ಚರ್ಚೆಯಾಗಲಿದೆ.  ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರಿಸಲಿದ್ದಾರೆ.  ಗುರುವಾರ ರಾಜ್ಯಸಭೆಯಲ್ಲಿ ಚರ್ಚೆಗೆ ಬರಲಿದೆ ಎಂದರು.  ಬಳಿಕ ಶೂನ್ಯ ವೇಳೆಗೆ ಸಭಾಧ್ಯಕ್ಷರು ಸೂಚಿಸುತ್ತಿದ್ದಂತೆ, ವಿಪಕ್ಷ ಸದಸ್ಯರು ತಮ್ಮ ಆಸನಗಳಿಂದ ಎದ್ದು ನಿಂತು ಘೋಷಣೆ ಕೂಗಲು ಆರಂಭಿಸಿದರು.  ಆಮ್ ಆದ್ಮಿ ಪಕ್ಷದ ಸದಸ್ಯ ಸಂಜಯ್ ಸಿಂಗ್ ‘ಯೆಸ್’ ಬ್ಯಾಂಕ್ ಸಮಸ್ಯೆಯ ಚರ್ಚೆಗೆ ಬಯಸಿದರೆ, ವಿಪಕ್ಷದ ಮತ್ತೋರ್ವ ಸದಸ್ಯ ಮಾಧ್ಯಮಗಳೆರಡರ ಮೇಲಿನ ನಿಷೇಧದ ಕುರಿತು ಚರ್ಚೆಗೆ ಆಗ್ರಹಿಸಿದರು.  ಈ ಸಂದರ್ಭದಲ್ಲಿ ಸದರಿ ಮಾಧ್ಯಮಗಳ ಮೇಲಿನ ನಿಷೇಧ ತೆಗೆದುಹಾಕಲಾಗಿದೆ ಎಂದು ವೆಂಕಯ್ಯನಾಯ್ಡು ಉತ್ತರಿಸಿದರು. ಆದಾಗ್ಯೂ ವಿಪಕ್ಷ ಸದಸ್ಯರು ಘೋಷಣೆ ಕೂಗಲಾರಂಭಿಸಿದ್ದರಿಂದ ಮಧ್ಯಾಹ್ 2 ಗಂಟೆಗೆ ಕಲಾಪ ಮುಂದೂಡಲಾಯಿತು.