ಆಲಮೇಲ ತಾಲ್ಲೂಕು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಿ.ಕೆ.ಹೆಚ್‌.ಶಾಸ್ತ್ರೀ ಆಯ್ಕೆ

CK H Shastry selected as the President of Alamela Taluk Conference

ಗದಗ 06: ಆಲಮೇಲ ತಾಲ್ಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸಾಹಿತಿ, ಕಲಾವಿದ ಸಂಘಟನಾಕಾರ ಚನ್ನವೀರಶಾಸ್ತ್ರೀ ಅವರನ್ನು ಆಯ್ಕೆ ಮಾಡಿದ್ದು ಅತ್ಯಂತ ಸೂಕ್ತವಾದುದು ಎಂದು ಗದಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ನಿಯೋಜಿತ ಸರ್ವಾಧ್ಯಕ್ಷ ಪ್ರೊ. ಚಂದ್ರಶೇಖರ ವಸ್ತ್ರದ ಹೇಳಿದರು. ಅವರು, ಆಲಮೇಲ ತಾಲ್ಲೂಕು ಕಸಾಪ, ಗದಗ ನಗರದ ಚನ್ನವೀರಶಾಸ್ತ್ರೀ ಹಿರೇಮಠಅವರ ಮನೆಯಲ್ಲಿಅಧೀಕೃತಅವ್ಹಾನ ನೀಡಿದ ಸಭೆಯನ್ನುದ್ದೇಶಿಸಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಡಾ. ರಮೇಶಕತ್ತಿಯವರು, ಆಲಮೇಲ ಕಸಾಪ ಪರವಾಗಿ ಅಭಿನಂದಿಸಿ ಸಮ್ಮೇಳನಕ್ಕೆ ಆವ್ಹಾನಿಸಿ ಪರಿಷತ್ತಿನ ಪರವಾಗಿಆಮಂತ್ರಣ ನೀಡಿದರು. 

ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ " ಕಡಣಿ ಶಾಸ್ತ್ರೀಗಳು ಕಲೆ, ಸಾಹಿತ್ಯ ಸಂಸ್ಕೃತಿಯಲ್ಲಿ ನಾಲ್ಕು ದಶಕಗಳಿಂದಲೂ ಗಮನಾರ್ಹ ಸೇವೆ ಮಾಡಿದ್ದಾರೆ, ಅವರ ಸೇವೆಗೆ ಸಂದಗೌರವಇದು, ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿರುವುದು ಪರಿಷತ್ತಿನ ಪದಾಧಿಕಾರಿಗಳು ಉತ್ತಮ ನಿರ್ಧಾರ ಮಾಡಿದ್ದಾರೆಎಂದರು. ವಿಭೂತಿ ಪತ್ರಿಕೆ ಸಂಪಾದಕಅಂದಾನಪ್ಪ ವಿಭೂತಿ ಮಾತನಾಡಿ ಕಡಣಿಯಿಂದ ರಾಷ್ಟ್ರದ ರಾಜ್ಯದಾನಿಯವರೆಗೆ ತಮ್ಮ ಸೇವಾ ವ್ಯಾಪ್ತಿ ವಿಸ್ತರಿಸದ್ದು ಸಮಾನ್ಯವಲ್ಲ ಇವರನ್ನು ಆಯ್ಕೆ ಮಾಡಿದ್ದು ಅತ್ಯಂತ ಯೋಗ್ಯವೆಂದರು, ನಿವೃತ್ತ ಪ್ರಾಚಾರ್ಯಡಾ. ಜಿ.ಬಿ.ಪಾಟೀಲರು ಮಾತನಾಡಿ ದೇಶದಾದ್ಯಂತ ಸಂಗೀತ ದಿಗ್ಗಜರನ್ನು ಗದುಗಿಗೆ ಕರೆದು ಸಮಾರಂಭ ಆಯೋಜಿಸುವ ಮೂಲಕ ಅನೇಕ ಯುವಕಲಾವಿದರಿಗೆ ವೇದಿಕೆ ನೀಡಿದ್ದಾರೆಎಂದರು. ಪ್ರೊ. ಡಾ.ಅನ್ಮದಾನಿ ಹಿರೇಮಠ, ಸುರೇಶ ಕುಂಬಾರ, ಜಿಲ್ಲಾ ಕಸಾಪ ಕಾರ್ಯದರ್ಶಿ ಕಿಶೋರ ಬಾಬು ನಾಗರಕಟ್ಟಿ ಮತ್ತು ಗದಗ ಬೆಟಗೇರಿ ನಗರ ಸಭೆ ಮಾಜಿ ಅಧ್ಯಕ್ಷೆ ಶಿವಲೀಲಾ ಅಕ್ಕಿ ಮೊದಲಾದವರು ಮಾತನಾಡಿ ಶಾಸ್ತ್ರಿಗಳ ಸಂಗೀತ ಸಾಹಿತ್ಯ ಸೇವೆಯಕುರಿತು ಮಾತನಾಡಿದರು. 

ಅಲಮೇಲ ತಾಲೂಕಾ 2ನೆಯ ಕನ್ನಡ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷರಾಗಿ ಅಧಿಕೃತ ಆಮಂತ್ರಣವನ್ನು ಸ್ವೀಕರಿಸಿ ಚನ್ನವೀರಸ್ವಾಮಿ ಶಾಸ್ತ್ರಿ ಹಿರೇಮಠ ಕಡಣಿಯವರು ಮಾತನಾಡುತ್ತ, 35 ವರ್ಷಗಳಿಂದ ಕವಿಯಾಗಿ ಸಾಹಿತ್ಯ ಪ್ರಕಾಶಕನಾಗಿ ಪ್ರವಚನಕಾರನಾಗಿ ಸಂಘಟಕನಾಗಿ ಸೇವೆ ಸಲ್ಲಿಸುತ್ತ ಗದುಗಿನಲ್ಲಿ ನೆಲಸಿದ್ದರೂ ಕೂಡಾ ನಾಡ ನುಡಿಗೆ ಸಲ್ಲಿಸಿದ ಅಲ್ಪ ಸೇವೆಯನ್ನು ಗುರುತಿಸಿ ಜನ್ಮ ಭೂಮಿಯತಾಲೂಕಾ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿದ ಆಲಮೇಲ ತಾಲೂಕಾಅಧ್ಯಕ್ಷ ಶಿವಶರಣ ಗುಂದಗಿ ಹಾಗೂ ಪದಾಧಿಕಾರಿಗಳಿಗೆ, ಸಹಕರಿಸಿದ ಜಿಲ್ಲಾಅಧ್ಯಕ್ಷ ಕಾಶೀಂಪಿರ್ ವಾಲಿಕಾರಅವರಿಗೆಮತ್ತುನಿಕಟಪೂರ್ವಅಧ್ಯಕ್ಷಡಾ. ರಮೇಶ ಕತ್ತಿಯವರಿಗೆ ಅಭಿನಂದಿಸುತ್ತೇನೆ ಈ ಗೌರವಕ್ಕೆ ಭಾಜನವಾಗಲುಗದುಗಿನ ಸಹೃದಯರಾದತಮ್ಮೆಲ್ಲರ ಸಹಕಾರ ನಾನೆಂದು ಮರೆಯಲಾರೆ ಈ ಗೌರವನನಗೆ ಹೊಸ ಶಕ್ತಿ ತುಂಬಿದೆನಾಡ ನುಡಿ ಸೇವೆಗೆ ಸ್ಪೂರ್ತಿಯಾಗಿದೆ ಎಂದರು.