ಕೊರೊನಾ ಸೋಂಕಿನಿಂದ ಸಿ ಐ ಎಸ್ ಎಫ್ ಅಧಿಕಾರಿ ಸಾವು

ಕೊಲ್ಕತ್ತಾ, ಮೇ ೧೨,ಕೊರೊನಾ  ವೈರಸ್   ಪ್ರಕರಣಗಳು  ದಿನ ದಿನಕ್ಕೂ  ಹೆಚ್ಚುತ್ತಲೇ ಇವೆ. ದೇಶವನ್ನು ಬಾಧಿಸುತ್ತಿರುವ  ಕೊರೊನಾ  ಸಾಂಕ್ರಾಮಿಕ   ಭದ್ರತಾ ಪಡೆಗಳನ್ನು  ಕಾಡುತ್ತಿದೆ. ಕೇಂದ್ರ  ಅರೆ ಸೇನಾ ಪಡೆಗಳಿಗೆ ಸೇರಿದ ಸಿಐಎಸ್‌ಎಫ್  ಜೊತೆಗೆ ಬಿಎಸ್ ಎಫ್, ಐಟಿಬಿಟಿ, ಸಿ ಆರ್ ಪಿ ಎಫ್   ಯೋಧರೂ ಸಹ ಸೋಂಕಿಗೆ  ಒಳಗಾಗಿರುವುದು  ಕಳವಳ ಉಂಟುಮಾಡಿದೆ.ಈ ನಡುವೆ ಕೊರೊನಾ ಸೋಂಕಿಗೆ  ಒಳಗಾಗಿದ್ದ  ಸಿಐಎಸ್ ಎಫ್  ಅಧಿಕಾರಿ ಯೊಬ್ಬರು   ಸಾವನ್ನಪ್ಪಿದ್ದಾರೆ.  ಕೊಲ್ಕತ್ತಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ  ಸಹಾಯಕ ಸಬ್ ಇನ್ಸ್ ಪೆಕ್ಟರ್   ಜಾರು ಬರ್ಮನ್   ಕೊರೊನಾ ಸೋಂಕು ತಗುಲಿದ್ದು,  ಆದರೆ,  ಅವರು  ಚಿಕಿತ್ಸೆ  ಪಡೆಯುತ್ತಿದ್ದಾಗಲೇ  ಸೋಮವಾರ   ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಸಿಐಎಸ್‌ಎಫ್  ಹಿರಿಯ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.
ಕೆಲವು ದಿನಗಳಗಳಿಂದ   ಬರ್ಮನ್   ಸ್ಥಳೀಯ  ಆಸ್ಪತ್ರೆಯಲ್ಲಿ   ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದರೊಂದಿಗೆ  ಬರ್ಮನ್  ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಗುರುತಿಸುವ  ಕಾರ್ಯ ನಡೆಯುತ್ತಿತ್ತು.
ಇದಕ್ಕೂ ಮುನ್ನು   ಕೊಲ್ಕಾತ್ತಾ ದಲ್ಲಿರುವ ಇಂಡಿಯನ್ ಮ್ಯೂಸಿಯಂ ಬಳಿ  ಕರ್ತವ್ಯ ನಿರ್ವಹಿಸುತ್ತಿದ್ದ  ಸಿಐಎಸ್‌ಎಫ್  ಎಎಸ್‌ಐ, ಮುಂಬೈ  ಅಂತರಾಷ್ಟ್ರೀಯ  ವಿಮಾನ ನಿಲ್ದಾಣ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ  ಹೆಡ್ ಕಾನ್ಸ್ ಟೇಬಲ್  ಕೂಡಾ  ಕೊರೊನಾ ಸೋಂಕಿನಿಂದ  ಮೃತಪಟ್ಟಿದ್ದರು.ಹಾಗಾಗಿ, ಈವರೆಗೆ  ಅರೆಸೇನಾ ಪಡೆಗಳಲ್ಲಿ  ಕಾರ್ಯನಿರ್ವಹಿಸುವ ೭೫೮ ಮಂದಿಗೆ  ಕೊರೊನಾ ಪಾಸಿಟಿವ್  ಕಂಡುಬಂದಿದ್ದು,ಆರು ಮಂದಿ ಮೃತಪಟ್ಟಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸುತ್ತಿವೆ.