ಮಹಾಲಿಂಗಪುರಕ್ಕೆ ಮತ್ತೆ ಸಿಐಡಿ ಎಂಟ್ರಿ: ಮರು ವಿಚಾರಣೆ

CID enters Mahalingapura again: Re-investigation

ಲೋಕದರ್ಶನ ವರದಿ 

ಮಹಾಲಿಂಗಪುರಕ್ಕೆ ಮತ್ತೆ ಸಿಐಡಿ ಎಂಟ್ರಿ: ಮರು ವಿಚಾರಣೆ 

ಮಹಾಲಿಂಗಪುರ 17: ಸನ್2020 ನವ್ಹಂಬರ 9ರಂದು ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ ಜರುಗಿದ ಚುನಾವಣೆ ವೇಳೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಐಡಿ ವಿಚಾರಣೆ ವಿಭಾಗದ ಉಪ ಅಧೀಕ್ಷಕಿ ಪ್ರಭಾವತಿ ಪಾಂಡುರಂಗ ನೇತೃತ್ವದ ಅಧಿಕಾರಿಗಳ ತಂಡ ಕೋರ್ಟ ಆದೇಶದ ಮೇರೆಗೆ ಸ್ಥಳೀಯ ಜಿಎಲ್‌ಬಿಸಿ ಅತಿಥಿಗೃಹದಲ್ಲಿ ಮಂಳವಾರದಿಂದ ಮರುತನಿಖೆ ಆರಂಭಿಸಿ ವಿಚಾರಣೆ ಸುರು ಮಾಡಿದೆ. 

ಈ ಮುಂಚೆ ಬಿ ರಿಪೋರ್ಟ ಹಾಕಿ ಪ್ರಕರಣಕ್ಕೆ ತೆರೆ ಎಳೆಯಲಾಗಿತ್ತು. ಆದರೆ ಬೆಂಗಳೂರು ಡಿವೈಎಸ್‌ಪಿ ಸೈಬರ್ ಕ್ರೈಂ ವಿಭಾಗದ ಸಿಐಡಿ ಬಿ ಫಾಲ್ಸ್‌ ಅಂತಿಮ ವರದಿ ನೀಡಿದ್ದು ಮರೆ ತನಿಖೆಗೆ ಆದೇಶಿಸಬೇಕು ಎಂದು ಮನವಿ ಮಾಡಲಾಗಿತ್ತು. ಪ್ರಕರಣ ವಿಚಾರಣೆ ನಡೆಸಿದ ಬನಹಟ್ಟಿ ನ್ಯಾಯಾಲಯ ಮರುತನಿಖೆ ನಡೆಸುವದು ನ್ಯಾಯಯುತವಾದದ್ದು ಮತ್ತು ಸೂಕ್ತವಾದದ್ದು ಎಂದು ಅಭಿಪ್ರಾಯಪಟ್ಟಿದೆ. ಈ ತರಹದ ಪ್ರಕರಣಗಳಲ್ಲಿ ವಿವಿಧ ನ್ಯಾಯಾಲಯಗಳಲ್ಲಿನ ತೀರ​‍್ಪನನು ಕೂಡಾ ಕೋರ್ಟ ಗಣನೆಗೆ ತೆಗೆದುಕೊಂಡು ತನ್ನ ತೀರ​‍್ು ನೀಡಿದೆ. 

ಸಿಐಡಿ ತಂಡ ಪುರಸಭೆ ಸದಸ್ಯರಾದ ಗೋದಾವರಿ ಬಾಟ, ಸುಜಾತಾ ಮಾಂಗ, ಸವಿತಾ ಹುರಕಡ್ಲಿ ಪುರಸಭೆ ಸಿಬ್ಬಂದಿಯವರಾದ ಎಂ.ಕೆ.ದಳವಾಯಿ, ವಿಕ್ರಂ ಹವಾಲ್ದಾರ, ಬಿ.ವೈ.ಮರ್ದಿ, ರಾಜೇಶ್ವರಿ ಸೋರಗಾಂವಿ, ನಿವೃತ್ತ ಸಿಬಬಂದಿಯವರಾದ ವಿ.ಕೆ.ಕುಲಕರ್ಣಿ, ಡಿ.ಬಿ.ಪಠಾಣ ಸೇರಿದಂತೆ ಮರು ತನಿಖೆಗೆ ಒತ್ತಾಯಿಸಿದ ಚಾಂದನಿ ನಾಯಕ ಹಾಗೂ ಅವರ ಮೈದುನ ಅರ್ಜುನ ನಾಯಕ ಸೇರಿ ಬುಧವಾರದವರೆಗೆ ಸುಮಾರು 20 ಜನರ ವಿಚಾರಣೆ ನಡೆಸಿತು.