ಮಹಾಲಿಂಗಪುರಕ್ಕೆ ಮತ್ತೆ ಸಿಐಡಿ ಎಂಟ್ರಿ: ಮರು ವಿಚಾರಣೆ
CID enters Mahalingapura again: Re-investigation
ಲೋಕದರ್ಶನ ವರದಿ
ಮಹಾಲಿಂಗಪುರಕ್ಕೆ ಮತ್ತೆ ಸಿಐಡಿ ಎಂಟ್ರಿ: ಮರು ವಿಚಾರಣೆ
ಮಹಾಲಿಂಗಪುರ 17: ಸನ್2020 ನವ್ಹಂಬರ 9ರಂದು ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ ಜರುಗಿದ ಚುನಾವಣೆ ವೇಳೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಐಡಿ ವಿಚಾರಣೆ ವಿಭಾಗದ ಉಪ ಅಧೀಕ್ಷಕಿ ಪ್ರಭಾವತಿ ಪಾಂಡುರಂಗ ನೇತೃತ್ವದ ಅಧಿಕಾರಿಗಳ ತಂಡ ಕೋರ್ಟ ಆದೇಶದ ಮೇರೆಗೆ ಸ್ಥಳೀಯ ಜಿಎಲ್‌ಬಿಸಿ ಅತಿಥಿಗೃಹದಲ್ಲಿ ಮಂಳವಾರದಿಂದ ಮರುತನಿಖೆ ಆರಂಭಿಸಿ ವಿಚಾರಣೆ ಸುರು ಮಾಡಿದೆ.
ಈ ಮುಂಚೆ ಬಿ ರಿಪೋರ್ಟ ಹಾಕಿ ಪ್ರಕರಣಕ್ಕೆ ತೆರೆ ಎಳೆಯಲಾಗಿತ್ತು. ಆದರೆ ಬೆಂಗಳೂರು ಡಿವೈಎಸ್‌ಪಿ ಸೈಬರ್ ಕ್ರೈಂ ವಿಭಾಗದ ಸಿಐಡಿ ಬಿ ಫಾಲ್ಸ್ ಅಂತಿಮ ವರದಿ ನೀಡಿದ್ದು ಮರೆ ತನಿಖೆಗೆ ಆದೇಶಿಸಬೇಕು ಎಂದು ಮನವಿ ಮಾಡಲಾಗಿತ್ತು. ಪ್ರಕರಣ ವಿಚಾರಣೆ ನಡೆಸಿದ ಬನಹಟ್ಟಿ ನ್ಯಾಯಾಲಯ ಮರುತನಿಖೆ ನಡೆಸುವದು ನ್ಯಾಯಯುತವಾದದ್ದು ಮತ್ತು ಸೂಕ್ತವಾದದ್ದು ಎಂದು ಅಭಿಪ್ರಾಯಪಟ್ಟಿದೆ. ಈ ತರಹದ ಪ್ರಕರಣಗಳಲ್ಲಿ ವಿವಿಧ ನ್ಯಾಯಾಲಯಗಳಲ್ಲಿನ ತೀರ್ಪನನು ಕೂಡಾ ಕೋರ್ಟ ಗಣನೆಗೆ ತೆಗೆದುಕೊಂಡು ತನ್ನ ತೀರ್ು ನೀಡಿದೆ.
ಸಿಐಡಿ ತಂಡ ಪುರಸಭೆ ಸದಸ್ಯರಾದ ಗೋದಾವರಿ ಬಾಟ, ಸುಜಾತಾ ಮಾಂಗ, ಸವಿತಾ ಹುರಕಡ್ಲಿ ಪುರಸಭೆ ಸಿಬ್ಬಂದಿಯವರಾದ ಎಂ.ಕೆ.ದಳವಾಯಿ, ವಿಕ್ರಂ ಹವಾಲ್ದಾರ, ಬಿ.ವೈ.ಮರ್ದಿ, ರಾಜೇಶ್ವರಿ ಸೋರಗಾಂವಿ, ನಿವೃತ್ತ ಸಿಬಬಂದಿಯವರಾದ ವಿ.ಕೆ.ಕುಲಕರ್ಣಿ, ಡಿ.ಬಿ.ಪಠಾಣ ಸೇರಿದಂತೆ ಮರು ತನಿಖೆಗೆ ಒತ್ತಾಯಿಸಿದ ಚಾಂದನಿ ನಾಯಕ ಹಾಗೂ ಅವರ ಮೈದುನ ಅರ್ಜುನ ನಾಯಕ ಸೇರಿ ಬುಧವಾರದವರೆಗೆ ಸುಮಾರು 20 ಜನರ ವಿಚಾರಣೆ ನಡೆಸಿತು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 