ಕೊರೋನಾ ವೈರಸ್ ವಿಷಯದಲ್ಲಿ ಕೇಂದ್ರ ಸಂವೇದನಾ ಶೂನ್ಯ: ರಾಹುಲ್

ನವದೆಹಲಿ, ಮಾ 13, ಕೊರೋನಾ ವೈರಸ್ ಸೊಂಕು ಅತಿದೊಡ್ಡ ಸಮಸ್ಯೆ ಎಂದು ಬಣ್ಣಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ವೈರಾಣು ನಿಯಂತ್ರಣದ ವಿಷಯದಲ್ಲಿ ಕೇಂದ್ರ ಸರ್ಕಾರ ಸಂವೇದನಾಶೂನ್ಯವಾಗಿದೆ ಎಂದು ಟೀಕಿಸಿದ್ದಾರೆ.  “ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ.  ಕೊರೋನಾ ವೈರಸ್ ಅತ್ಯಂತ ಗಂಭೀರ ಸಮಸ್ಯೆ.  ಇದನ್ನು ಕಡೆಗಣಿಸುವುದರಿಂದ ಯಾವುದೇ ಪರಿಹಾರ ಸಿಗುವುದಿಲ್ಲ” ಎಂದು ಅವರು ಫೆಬ್ರವರಿ 12ರ ಟ್ಟೀಟನ್ನು ಮರು ಟ್ವೀಟ್ ಮಾಡಿ ತಿಳಿಸಿದ್ದಾರೆ.   “ಕೇಂದ್ರ ಸರ್ಕಾರವು ಸಂವೇದನಾರಹಿತವಾಗಿದ್ದು, ಕರೋನಾ ವೈರಸ್ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ದೇಶದ ಆರ್ಥಿಕತೆ ನಾಶವಾದೀತು” ಎಂದು ಎಚ್ಚರಿಸಿದ್ದಾರೆ.  ಗುರುವಾರ ಸುದ್ದಿಗಾರರೊಡನೆ ಮಾತನಾಡಿದ್ದ ರಾಹುಲ್ ಗಾಂಧಿ, “ಕೊರೋನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ.  ವೈರಾಣು ದೇಶಾದ್ಯಂತ ಹರಡುತ್ತಿದೆ.  ಆದರೆ ನಮ್ಮ ಪ್ರಧಾನಿಯವರು ಚಕ್ರದ ಮೇಲೆ ಮಲಗಿ ನಿದ್ರಿಸುತ್ತಿದ್ದಾರೆ.  ದುರದೃಷ್ಟವಶಾತ್ ನಮ್ಮ ಮಾತನ್ನು ಅವರು ಆಲಿಸುತ್ತಿಲ್ಲ” ಎಂದು ದೂರಿದ್ದರು.