ಸಿಡಿಸಿ ಪ್ರಯೋಗಾಲಯ ಕಲುಷಿತದಿಂದ ಕೊವಿಡ್‍-19 ಪರೀಕ್ಷೆಗಳು ವಿಳಂಬ- ವಾಷಿಂಗ್ಟನ್ ಪೋಸ್ಟ್ ವರದಿ

ವಾಷಿಂಗ್ಟನ್, ಏಪ್ರಿಲ್ 19,ಕೊವಿಡ್‍-19 ಪರೀಕ್ಷಾ ಕಿಟ್‌ಗಳು ತ್ವರಿತವಾಗಿ ಲಭ್ಯವಾಗಲು ಅಮೆರಿಕ ರೋಗ ತಡೆ ಮತ್ತು ನಿಯಂತ್ರಣ (ಸಿಡಿಸಿ) ವಿಳಂಬ ಮಾಡಿರುವುದಕ್ಕೆ ಸಿಡಿಸಿಯ ಕೇಂದ್ರ ಪ್ರಯೋಗಾಲಯದಲ್ಲಿನ ವೈದ್ಯಕೀಯ ವೈಫಲ್ಯವೇ ಕಾರಣ ಎಂದು  ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಪರೀಕ್ಷಾ ಕಿಟ್‌ಗಳನ್ನು ಜೋಡಿಸಿರುವ ಸಿಡಿಸಿ ಸೌಲಭ್ಯಾ ಕೇಂದ್ರಗಳು ‘ಉತ್ಪಾದನಾ ವಿಧಾನಗಳನ್ನು ಉಲ್ಲಂಘಿಸಿವೆ.  ಇದರ ಪರಿಣಾಮವಾಗಿ ಹೆಚ್ಚು ಸೂಕ್ಷ್ಮವಾದ ಪತ್ತೆ ಪ್ರಕ್ರಿಯೆಯಲ್ಲಿ ಬಳಸಲಾಗುವ ಮೂರು ಪರೀಕ್ಷಾ ಘಟಕಗಳಲ್ಲಿ ಒಂದು  ಕಲುಷಿತಗೊಂಡಿದೆ.’ ಎಂದು ವಿಜ್ಞಾನಿಗಳು ಮತ್ತು ಫೆಡರಲ್ ನಿಯಂತ್ರಕರನ್ನು ಉಲ್ಲೇಖಿಸಿ ಶನಿವಾರ ವಾಷಿಂಗ್ಟನ್‍ ಪೋಸ್ಟ್‍ ನಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಲಾಗಿದೆ.  ಕಾರ್ಯಾಚರಣೆ ವೈಫಲ್ಯದಿಂದ ವೈರಸ್‌ನ ಪರೀಕ್ಷೆಯುವ ರಾಷ್ಟ್ರಮಟ್ಟದಲ್ಲಿ ವಿಳಂಬಕ್ಕೆ ಕಾರಣವಾಯಿತು. ಮತ್ತು ವೈರಸ್‌ನ ಹರಡುವಿಕೆ ವಿರುದ್ಧದ ಹೋರಾಟಕ್ಕೆ ಅಡ್ಡಿಯಾಯಿತು ಎಂದು ವರದಿ ತಿಳಿಸಿದೆ.ಸಿಡಿಸಿ ತನ್ನದೇ ಶಿಷ್ಟಾಚಾರದ ಅನುಗುಣವಾಗಿ ತನ್ನ ಪರೀಕ್ಷಾ ಕಿಟ್‍ ತಯಾರಿಸಲಿಲ್ಲ ಎಂಬ  ಅಮೆರಿಕ ಆಹಾರ ಮತ್ತು ಔಷಧ ಆಡಳಿತ(ಎಎಫ್‍ಡಿಎ)ವನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.  ಸುಳ್ಳು ಪರೀಕ್ಷಾ ವರದಿಗಳಿಂದ ಕೊವಿಡ್‍ -19 ಸೋಂಕು  ಹರಡುವಿಕೆಗೆ ಸಹಕಾರಿಯಾಗುತ್ತದೆ ಎಎಫ್‍ಡಿಎ ಹೇಳಿದೆ.