ಬೆಂಗಳೂರು, ಮೇ 6, ನಗರದ ವಿವಿಧೆಡೆ 56 ಕಡೆ ಸಿಸಿಬಿ ಪೊಲೀಸರು ದಾಳಿ ನಡೆಸಿ 1.70 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಕೊರೊನಾ ವೈರಸ್ ಸೋಂಕು ನಿಯಂತ್ರಿಸಲು ಲಾಕ್ಡೌನ್ ಆರಂಭವಾಗಿ 40 ದಿನಗಳು ಕಳೆದಿದ್ದು, ಈ ಸಂದರ್ಭದಲ್ಲಿ ಪ್ರಮುಖವಾಗಿ ನಕಲಿ ಫೇಸ್ಮಾಸ್ಕ್, ನಕಲಿ ಹ್ಯಾಂಡ್ ಸ್ಯಾನಿಟೈಸರ್, ಕಾಳ ಸಂತೆಯಲ್ಲಿ ಆಹಾರ ಧಾನ್ಯಗಳ ಮಾರಾಟ, ಅಕ್ರಮ ಮದ್ಯ ಮಾರಾಟ,ಎಂ ಆರ್ ಪಿಗಿಂತ ಹೆಚ್ಚಿನ ಬೆಲೆಗೆ ಆಹಾರ ಸಾಮಗ್ರಿಗಳ ಮಾರಾಟ ಸೇರಿ ಅಕ್ರಮ ಜೂಜಾಟ ಕೇಂದ್ರಗಳನ್ನು ಪತ್ತೆ ಮಾಡಿ
56 ಕಡೆ ದಾಳಿ ನಡೆಸಲಾಗಿತ್ತು.ಆರೋಪಿಗಳ ವಶದಿಂದ 17312 ನಕಲಿ ಸ್ಯಾನಿಟೈಸರ್ ಬಾಟಲ್, 2,000 ಲೀಟರ್ ಕೆಮಿಕಲ್ಸ್, 18750 ನಕಲಿ ಫೇಸ್ ಮಾಸ್ಕ್ ಹಾಗೂ 270 ನಕಲಿ ಥರ್ಮಾ ಮೀಟರ್ ಹಾಗೂ 1500 ಮದ್ಯದ ಬಾಟಲಿ ಮತ್ತು ಕೃತ್ಯಕ್ಕೆ ಬಳಸಿದ ಎರಡು ಕಾರು, ಮೊಬೈಲ್ ಫೋನ್ ಒಟ್ಟು 1.70ಕೋಟಿ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು 71 ಜನರನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.