ಮಸಾಜ್ ಕೇಂದ್ರದ ಮೇಲೆ ಸಿಸಿಬಿ ದಾಳಿ: 61 ಜನರ ಬಂಧನ

ಬೆಂಗಳೂರು, ಮಾ.9,12 ಸ್ಪಾ ಮಸಾಜ್ ಪಾರ್ಲರ್,7 ವೇಶ್ಯಾವಾಟಿಕೆ ಗೃಹಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 61ಜನರನ್ನು ಬಂಧಿಸಿದ್ದಾರೆ.ಒಟ್ಟು 19 ಪ್ರಕರಣಗಳು ದಾಖಲಾಗಿದ್ದು, ದಾಳಿಯ ಸಂದರ್ಭದಲ್ಲಿ ಪೊಲೀಸರು 69 ಯುವತಿಯರನ್ನು ರಕ್ಷಿಸಿದ್ದಾರೆ.ಪ್ರಸ್ತುತ ಸಾಲಿನಲ್ಲಿ ಸಿಸಿಬಿ ಪೊಲೀಸರು ವೇಶ್ಯಾವಾಟಿಕೆ, ಮಸಾಜ್ ಪಾರ್ಲರ್ ಹಾಗೂ ಲಾಡ್ಜ್ ಮೇಲೆ ದಾಳಿ ನಡೆಸಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು.ರಾಜ್ ಕುಮಾರ್, ರಘು, ಭರತ್, ಗೋಪಿ, ಆನಂದ್,  ಕುಮಾರ್, ಪ್ರಜ್ವಲ್, ಸಂಧ್ಯಾ, ಸ್ವಾತಿ ಸೇರಿ 61ಜನ ಬಂಧಿತ ಆರೋಪಿಗಳು.ಬಂಧಿತರು  ನಗರದ ಎಚ್ ಎಸ್ ಆರ್ ಲೇಔಟ್, ಕೆಂಗೇರಿ, ಹೆಬ್ಬಾಳ, ಮಾಗಡಿ ರಸ್ತೆ, ಹೂಡಿ ವೃತ್ತ,  ಬಾಣಸವಾಡಿ ಸುತ್ತಮುತ್ತ ಪ್ರದೇಶಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎಂದು  ಪೊಲೀಸರು ತಿಳಿಸಿದ್ದಾರೆ .ನಗರ  ಅಪರ  ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್  ಆರ್ ಜೈನ್, ಮಹಿಳಾ ಸಂರಕ್ಷಣಾ ದಳದ ಎಸಿಪಿ ಎಂ ಆರ್ ಮುದವಿ ಅವರ ನೇತೃತ್ವದಲ್ಲಿ  ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.