ಲಕ್ನೋ, ಮಾ ೭, ರಾಮಜನ್ಮ ಭೂಮಿ ನಿವೇಶನ ವಿವಾದವನ್ನು ಇತ್ಯರ್ಥಪಡಿಸಿದ ಸುಪ್ರೀಂ ಕೋರ್ಟ್ ಆಯೋಧ್ಯೆ ರಾಮ ಮಂದಿರ ಪರವಾಗಿ ತೀರ್ಪು ಪ್ರಕಟಿಸಿದ ನಂತರ, ಈಗ ಎಲ್ಲರ ಕಣ್ಣು ಬಾಬ್ರಿ ಮಸೀದಿ ದ್ವಂಸ ಪ್ರಕರಣ ಸಂಬಂಧ ತ್ವರಿತ ವಿಚಾರಣೆಯ ಮೇಲೆ ನೆಟ್ಟಿದೆ.ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಸೂಚನೆಯ ನಂತರ ಪ್ರಕರಣವನ್ನು ಸಿಬಿಐ ವಿಶೇಷ ನ್ಯಾಯಾಲಯ ಕೈಗೆತ್ತಿಕೊಂಡಿದ್ದು, ಪ್ರಕರಣದ ೨೯೪ನೇ ಸಾಕ್ಷಿಯಾಗಿರುವ ಎಂ. ನಾರಾಯಣನ್ ಶುಕ್ರವಾರ ಹೇಳಿಕೆ ದಾಖಲಿಸಲು ನ್ಯಾಯಾಲಯದ ಮುಂದೆ ಹಾಜರಾಗಿದ್ದರು ಈ ಪ್ರಕರಣದಲ್ಲಿ ಸಿಬಿಐ ಪರವಾಗಿ ನಾರಾಯಣನ್ ಕೊನೆಯ ಸಾಕ್ಷಿಯಾಗಿದ್ದಾರೆ . ಈ ಪ್ರಕರಣವನ್ನು ೧೯೯೨, ಡಿಸೆಂಬರ್ ೬, ರಂದು ರಾಮಜನ್ಮಭೂಮಿ ಪೊಲೀಸ್ ಠಾಣೆಯ ಠಾಣಾಧಿಕಾರಿ, ರಾಮಜನ್ಮಭೂಮಿ ಚೌಕಿ ಉಸ್ತುವಾರಿ ದಾಖಲಿಸಿದ್ದರು. ಸಿ ಆರ್ ಪಿ ಸಿ ಸೆಕ್ಷನ್ ೩೧೩ರಡಿ ೩೩ ಆರೋಪಿಗಳ ಹೇಳಿಕೆಯನ್ನು ವಿಶೇಷ ಸಿಬಿಐ ನ್ಯಾಯಧೀಶ ಎಸ್.ಕೆ.ಯಾದವ್ ದಾಖಲಿಸಿಕೊಳ್ಳುವುದನ್ನು ಆರಂಭಿಸಿದ್ದಾರೆ. ಮಸೀದಿ ದ್ವಂಸ ಸಂಬಂಧ ದಾಖಲಾಗಿದ್ದ ಒಟ್ಟು ೪೮ ಎಫ್ ಐ ಆರ್ ಗಳ ಬಗ್ಗೆ ತನಿಖೆ ನಡೆಸಿದ ಸಿಬಿ- ಸಿಐಡಿ ನಂತರ ಅದನ್ನು ಸಿಬಿಐಗೆ ಹಸ್ತಾಂತರಿಸಿತ್ತು. ನಂತರ ಮೇ ೩೧, ೨೦೧೭ರ ಮೇ ತಿಂಗಳಲ್ಲಿ ಸಿಬಿಐ ೪೯ ಮಂದಿಯ ವಿರುದ್ದ ದೋಷಾರೋಪಪಟ್ಟಿ ಸಲ್ಲಿಸಿತ್ತು ಈ ಪೈಕಿ ೧೬ ಮಂದಿ ಮೃತಪಟ್ಟಿದ್ದಾರೆ ಪ್ರಕರಣದ ತೀರ್ಪನ್ನು ಒಂಬತ್ತು ತಿಂಗಳೊಳಗೆ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ವರ್ಷ ತಾಕೀತು ಮಾಡಿರುವ ಹಿನ್ನಲೆಯಲ್ಲಿ ನ್ಯಾಯಾಲಯ ೨೦೨೦ರ ಅಂತ್ಯದ ವೇಳೆಗೆ ತೀರ್ಪು ಪ್ರಕಟಿಸುವ ನಿರೀಕ್ಷೆಯಿದೆ.