ರಾಣಾ ಕಪೂರ್ ಲಂಚ ಆರೋಪ ಪ್ರಕರಣ ; ಸಿಬಿಐ ಅನೇಕ ಕಡೆ ದಾಳಿ

ಮುಂಬೈ, ಮಾರ್ಚ್ 09,  ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರ 600 ಕೋಟಿ ರೂಪಾಯಿ  ಲಂಚ ಪ್ರಕರಣದ ಆರೋಪಕ್ಕೆ  ಸಂಬಂಧಿಸಿದಂತೆ  ಸಿಬಿಐ ಇಂದು ಮುಂಬೈನ 7 ಸ್ಥಳಗಳ ಮೇಲೆ ದಾಳಿ ಮಾಡಿದೆ. ಈ ನಡುವೆ  ರಾಣಾ ಕಪೂರ್ ಬಂಧಿಸಲಾಗಿದ್ದು ನ್ಯಾಯಾಲಯ ಇದೆ 11ರ ತನಕ ಇಡಿ ವಶಕ್ಕೆ ನೀಡಿದೆ. ಸೋಮವಾರ ಸಿಬಿಐನ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಮುಂಬೈನ ಏಳು ಸ್ಥಳಗಳ ಮೇಲೆ ದಾಳಿ ನಡೆಸಿ ಕೆಲವು ಮಹತ್ವದ  ದಾಖಲೆ  ಪರಿಶೀಲನೆ ನಡೆಸುತ್ತಿದ್ದಾರೆ.  ರಾಣಾ ಕಪೂರ್ ವಿರುದ್ಧ ಆರ್ಥಿಕ ಅಪರಾಧ ಆರೋಪದ ಮೇಲೆ ಪ್ರಕರಣ  ದಾಖಲು ಮಾಡಲಾಗಿದೆ. ಸಿಬಿಐ ಶುಕ್ರವಾರ  ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಗೆ ಸಂಬಂಧಿಸಿದ ಕಂಪನಿ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡಿತ್ತು. ಇದರ ಹಿನ್ನಲೆಯಲ್ಲಿ ಇಂದು ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ ವಿದೇಶಕ್ಕೆ ಹೊರಟಿದ್ದ ಅವರ ಮಗಳನನ್ನು ಏರ್  ಪೋರ್ಟ್ ನಲ್ಲಿ  ಅಧಿಕಾರಿಗಳು  ತಡೆದಿದ್ದಾರೆ.