ಕೊರೊನಾ : ಬೀಜಿಂಗ್ ನಲ್ಲಿ ಮೊದಲ ಆಮದು ಬೀಜಿಂಗ್, ಮಾ 13 (ಕ್ಸಿನ್ಹುವಾ) ಬೀಜಿಂಗ್ ನಲ್ಲಿ ಬ್ರಿಟನ್ ಮೂಲದ ಮೊದಲ ಕೊರೊನಾ ಸೋಂಕು ಪ್ರಕರಣ ವರದಿಯಾಗಿದೆ ಎಂದು ಸ್ಥಳೀಯ ಆರೋಗ್ಯ ಪ್ರಾಧಿಕಾರ ಶುಕ್ರವಾರ ತಿಳಿಸಿದೆ. ಓರ್ವ ವ್ಯಕ್ತಿಗೆ ಸ್ಥಳೀಯವಾಗಿ ಸೋಂಕು ತಗುಲಿದ್ದರೆ ಎಂಟು ಪ್ರಕರಣಗಳು ವಿದೇಶಿ ಮೂಲದ್ದಾಗಿವೆ. ಮೂರು ನೆದರ್ ಲ್ಯಾಂಡ್, ಎರಡು ಇಟಲಿ ಮತ್ತು ಕೊರಿಯಾ, ಫ್ರಾನ್ಸ್ ಮತ್ತು ಆಸ್ಟ್ರಿಯಾದಿಂದ ತಲಾ ಒಂದು ಪ್ರಕರಣ ವರದಿಯಾಗಿದೆ ಎಂದು ಬೀಜಿಂಗ್ ನಗರಪಾಲಿಕೆ ಆರೋಗ್ಯ ಆಯೋಗ ತಿಳಿಸಿದೆ. ಗುರುವಾರ ಬೀಜಿಂಗ್ ನಲ್ಲಿ 436 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದೆ. 342 ಜನರಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ವಾಪಸ್ ಮನೆಗೆ ಕಳುಹಿಸಲಾಗಿದೆ. ಎಂಟು ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನೂ 31 ಶಂಕಿತ ಪ್ರಕರಣಗಳಿವೆ. ಸತತ 14 ದಿನಗಳ ಕಾಲ 16 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಿಂದ ಯಾವುದೇ ಹೊಸ ಸೋಂಕಿನ ಪ್ರಕರಣ ದಾಖಲಾಗಿಲ್ಲ.