ಶಾಂತಿನಿಕೇತನ, ಮಾ 07, ಚೀನಾದಲ್ಲಿ ಪತ್ತೆಯಾಗಿ, ಪ್ರಸ್ತುತ ವಿಶ್ವಚ ವಿವಿಧ ರಾಷ್ಟ್ರಗಳಲ್ಲಿ ಹರಡಿರುವ ಕೊರೋನಾ ವೈರಸ್ ತೀವ್ರ ಆತಂಕ ಸೃಷ್ಟಿಸಿದೆ. ಭಾರತದಲ್ಲಿಯೂ ಕೊರೋನಾ ಭೀತಿ ಎದುರಾಗಿರುವ ಕಾರಣ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ವೈರಾಣು ನಿಗ್ರಹಕ್ಕೆ ವ್ಯಾಪಕ ಕಟ್ಟೆಚ್ಚರ ಕೈಗೊಂಡಿದ್ದು, ಅತಿಹೆಚ್ಚು ಜನರು ಒಂದೆಡೆ ಸೇರದಂತೆ ಸೂಚಿಸಿದೆ. ಈ ನಿಟ್ಟಿನಲ್ಲಿ, ಶಾಂತಿನಿಕೇತನದ ವಿಶ್ವ ಭಾರತಿ ವಿಶ್ವವಿದ್ಯಾಲಯದ ಅಧಿಕಾರಿಗಳು, ಈ ವರ್ಷ ವಸಂತ ಪಂಚಮಿ ಉತ್ಸವ ನಡೆಸದಿರಲು ನಿರ್ಧರಿಸಿದ್ದಾರೆ. ಹೋಳಿ ಹಬ್ಬದ ಸಂಕೇತವಾಗಿ ವಿಶ್ವ ವಿದ್ಯಾಲಯದ ಆವರಣದಲ್ಲಿ ಪ್ರತಿ ವರ್ಷ ನಡೆಸಲಾಗುವ ವಸಂತ ಪಂಚಮಿ ಉತ್ಸವದಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. ಈ ಸಂದರ್ಭದಲ್ಲಿ ವೈರಾಣು ಒಬ್ಬರಿಂದೊಬ್ಬರಿಗೆ ಹಡುವ ಸಾಧ್ಯತೆ ಹೆಚ್ಚಿರುವ ಕಾರಣ, ಉತ್ಸವ ರದ್ದುಪಡಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.