ಕೇರಳ ಪ್ರವಾಸೋದ್ಯಮ ಅಭಿವೃದ್ಧಿಗೆ ಹತ್ತು ನಗರಗಳಲ್ಲಿ ಪ್ರಚಾರ ಅಭಿಯಾನ

ಬೆಂಗಳೂರು, ಮಾ 3, ಕೇರಳದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಭಾರತದ ಹತ್ತು ನಗರಗಳಲ್ಲಿ ಪಾಲುದಾರಿಕೆ ಸಭೆಗಳನ್ನು ಆಯೋಜಿಸಲು ನಿರ್ಧರಿಸಿದೆ. 2019ರ ಮೊದಲ ಮೂರು ತ್ರೈಮಾಸಿಕ ಅವಧಿಯಲ್ಲಿ ಪ್ರವಾಸಿಗರ ಸಂಖ್ಯೆ ಶೇ.16ರಷ್ಟು ಹೆಚ್ಚಳವಾಗಿದ್ದು, ಈ ಹಿನ್ನೆಲೆಯಲ್ಲಿ ಭಾರತದಾದ್ಯಂತ ಹಲವಾರು ಪ್ರವಾಸೋದ್ಯಮ ವ್ಯಾಪಾರ ಮೇಳಗಳಲ್ಲಿ ಕೇರಳದ ಸಾಂಪ್ರದಾಯಿಕ ಕಲಾ ಮಾದರಿಗಳು ಹಾಗೂ ಆಕರ್ಷಕ ಉತ್ಪನ್ನಗಳನ್ನು ಪ್ರವಾಸಿಗರಿಗೆ ಪ್ರದರ್ಶಿಸಲು ಪರಿಚಯಿಸಲು ತೀರ್ಮಾನಿಸಿದೆ. ಪ್ರವಾಸೋದ್ಯಮ ಅಭಿಯಾನದ ಹಿನ್ನೆಲೆಯಲ್ಲಿ ಕೇರಳ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ ಮಾತನಾಡಿ, ದೇಶಾದ್ಯಂತ ಪ್ರವಾಸೋದ್ಯಮ ಅಭ್ಯುದಯಕ್ಕೆ ಆದ್ಯತೆ ನೀಡುವ ಹಲವು ಸಭೆಗಳನ್ನು ಆಯೋಜಿಸಲಾಗಿದೆ. ಈ ಮೂಲಕ ಕೇರಳ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ತಂದುಕೊಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕೇರಳ ಪ್ರವಾಸೋದ್ಯಮ ಕಾರ್ಯದರ್ಶಿ ರಾಣಿ ಜಾರ್ಜ್, ಸ್ಥಳೀಯ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. “ಭಾರತದ ಮೂಲೆ ಮೂಲೆಯ ಪ್ರವಾಸಿಗರು ಈ ರಾಜ್ಯದ ಶ್ರೀಮಂತ ಪರಂಪರೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ವಿಶು, ತ್ರಿಶೂರ್ ಪೂರಂ ಮತ್ತು ಇತರೆ ಹಬ್ಬಗಳು ಬರುತ್ತಿದ್ದು, ಪ್ರವಾಸಿಗರನ್ನು ಸ್ವಾಗತಿಸಲು ಕೇರಳ ಸಜ್ಜಾಗಿದೆ. ಒಡಿಸ್ಸಿ, ಕಥಕ್, ಭರತನಾಟ್ಯಂ ಮಣಿಪುರಿ, ಮೋಹಿನಿಯಾಟ್ಟಂ, ಛೌ ಮತ್ತು ಕೂಚಿಪುಡಿಗಳು ಪ್ರವಾಸಿಗರ ಆಕರ್ಷಣೆಯಾಗಿದೆ ಎಂದರು. ಪ್ರವಾಸೋದ್ಯಮ ನಿರ್ದೇಶಕ ಪಿ.ಬಾಲ ಕಿರಣ್, ಕೇರಳ ಸ್ಥಳೀಯ ಪ್ರವಾಸಿಗರಿಗೆ ಸೂಕ್ತವಾಗುವ ಹಲವು ಉತ್ಪನ್ನಗಳು ಮತ್ತು ಅನುಭವಗಳನ್ನು ಸೇರ್ಪಡೆ ಮಾಡಿದ್ದು, 365 ದಿನಗಳು ಪ್ರವಾಸಕ್ಕೆ ಯೋಗ್ಯ ತಾಣವಾಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಮತ್ತೊಂದು ಜನಪ್ರಿಯ ಆಕರ್ಷಣೆ ದಕ್ಷಿಣ ಕೇರಳದ ಜಟಾಯು ಅರ್ಥ್ ಸೆಂಟರ್ ಆಗಿದ್ದು, ಇದರಲ್ಲಿ ಜಟಾಯುವಿನ ಬೃಹತ್ ಪ್ರತಿಮೆ ಇದೆ. ಇದು 200 ಅಡಿ ಉದ್ದ ಮತ್ತು 150 ಅಡಿ ಅಗಲ ಮತ್ತು 70 ಅಡಿ ಎತ್ತರವಿದ್ದು ವಿಶ್ವದ ಅತ್ಯಂತ ದೊಡ್ಡ ಕಾರ್ಯ ನಿರ್ವಹಿಸುವ ಪಕ್ಷಿಯ ಶಿಲ್ಪವಾಗಿಸಿದೆ ಎಂದರು.