ಬೆಂಗಳೂರು, ಮಾರ್ಚ್ 19, ಮುಂದಿನ ಕೆಲವು ದಿನಗಳಲ್ಲಿ , ವಿಶೇಷವಾಗಿ ತಿಂಗಳ ಕೊನೆಗೆ ರಾಜ್ಯದ ಅನೇಕ ಕಡೆ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಲಿದ್ದು ಜನತೆ ಎಚ್ಚರದಿಂದ ಇರಬೇಕು ಎನ್ನುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಒಂದೆಡೆ ಕೊರೊನಾ ಸೋಂಕು ಹಬ್ಬತ್ತಿದ್ದರೆ ಮತ್ತೊಂದೆಡೆ ತಾಪಮಾನವೂ ಗರಿಷ್ಟಮಟ್ಟಕ್ಕೆ ಏರಿಕೆಯಾಗುತ್ತಿದೆ.
ಈಗಾಗಲೇ ಹಲವು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ತಿಂಗಳ ಕೊನೆ ವಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟುವ ಸಾಧ್ಯತೆ ಇದೆ ಎಂದೂ ವರದಿ ಹೇಳಿದೆ ಮುಂದಿನ ಎರಡು ಇಲ್ಲ ಮೂರು ದಿನದಲ್ಲಿ ಮಂಡ್ಯ, ಹಾಸನ, ಮೈಸೂರು, ಕೊಡಗು ಸೇರಿದಂತೆ ಒಳನಾಡಿನ ಅನೇಕ ಕಡೆ ಮಳೆ ಯಾಗಲಿದೆ ಎಂದೂ ಹವಮಾನ ಇಲಾಖೆ ವರದಿ ಹೇಳಿದೆ.