ಉದ್ಯಮಿ ಮೇಲೆ ಗ್ರಾನೈಡ್ ಕಲ್ಲು ಬಿದ್ದು ಸಾವು
Businessman dies after falling granite stone
ಕಾರವಾರ 19: ಮಲ್ಲಿಕಾರ್ಜುನ ಟೈಲ್ಸ್ , ಸಿರಾಮಿಕ್ಸ್ ಅಂಗಡಿ ಮಾಲೀಕ, ಉದ್ಯಮಿ ಮುದ್ದಣ್ಣ ಹನುಮಪ್ಪ ಹಾಲುಂಡಿ (49) ಅವರ ಮೇಲೆ ಗ್ರಾನೈಟ್ ಕಲ್ಲು ಬಿದ್ದು ಸಾವನ್ನಪ್ಪಿದ್ದಾರೆ . ಈ ಘಟನೆ ಗುರುವಾರ ಬೆಳಿಗ್ಗೆ ಸದಾಶಿವಗಡದ ಬಿಡ್ತುಲಬಾಗ ಎಂಬಲ್ಲಿ ಮುದ್ದಣ್ಣ ಅವರ ಟೈಲ್ಸ ಶಾಪ್ ನಲ್ಲಿ ನಡೆದಿದೆ.
ಗ್ರಾನೈಟ್ ಕಲ್ಲಿಗೆ ಅವರು ಕೈಕೊಟ್ಟು ನಿಂತಿದ್ದ ವೇಳೆ , ನೆಲ ಒದ್ದೆಯಾಗಿದ್ದ ಕಾರಣ ಕಲ್ಲು ಜಾರಿ ಅವರ ಮುಖ ಭಾಗಕ್ಕೆ ಬಿತ್ತು ಎನ್ನಲಾಗಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ತರಲಾಯಿತಾದರೂ, ಆ ವೇಳೆಗೆ ಅವರು ಮೃತಪಟ್ಟಿದ್ದನ್ನು ವೈದ್ಯರು ದೃಢಪಡಿಸಿದರು ಎನ್ನಲಾಗಿದೆ.ಕಾರವಾರ ತಾಲೂಕು ಉಪ್ಪಾರ ಸಮುದಾಯದ ಹಿರಿಯ ಮುಖಂಡರು ಹಾಗೂ ಉಪ್ಪಾರ ಸಮಾಜದ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸಿದ್ದರು. ಆಕಸ್ಮಿಕ ಸಾವು ಅವರ ಅಪ್ತರಲ್ಲಿ, ಕುಟುಂಬ ವರ್ಗದವರಲ್ಲಿ ಅತೀವ ದುಃಖ ತಂದಿದೆ. ಮುದ್ದಣ್ಣ ಮೂಲತಃ ಬಾಗಲಕೋಟಿ ಜಿಲ್ಲೆಯ ನಿಲೋಗಲ್ಲ ಗ್ರಾಮದವರು. ಟೈಲ್ಸ ಉದ್ಯಮಿಯಾಗಿ ಅವರು ಕಾರವಾರದಲ್ಲಿ ನೆಲಸಿದ್ದರ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 