ನಿತ್ಯ ಮುಂಜಾನೆಯಿಂದ ಮುಂಡಗೋಡದಿಂದ ಬೆಂಗಳೂರಿಗೆ ಬಸ್ ಸೇವೆ ಪ್ರಾರಂಭ
Bus service from Mundagoda to Bengaluru starts every morning
ಲೋಕದರ್ಶನ ವರದಿ
ಮುಂಡಗೋಡ 31 : ಸದಸ್ಯ ಪ್ರಯಾಣಿಕರ ಸೌಲಭ್ಯವನ್ನು ಗಮದಲ್ಲಿಟ್ಟುಕೊಂಡು ಮುಂಡಗೋಡ- ಬೆಂಗಳೂರು ನಡುವೆ ಕೆಎಸ್‌ಆರ್ಟಿಸಿ ಬಸ್ ನೂತನ ಬಿಎಸ್-6 ಬಸ್ ಸೇವೆಗೆ ಸೋಮವಾರ ಚಾಲನೆ ನೀಡಲಾಯಿತು. ಗ್ಯಾರಂಟಿಯೋಜನೆಯ ಸದಸ್ಯ ಧರ್ಮರಾಜ ನಡಿಗೇರ ಹಸಿರು ಬಾವುಟ ತೋರಿಸುವ ಮೂಲಕ ಮುಂಡಗೋಡ-ಬೆಂಗಳೂರು ಬಸ್ ಸೇವೆಗೆ. ಚಾಲನೆ ನೀಡುವ ಮೂಲಕ ಬಸ್ ಸೇವೆ ಪ್ರಾರಂಭಗೊಂಡಿತು.
ಈ ಸಂದರ್ಭದಲ್ಲಿ ಗ್ಯಾರಂಟಿಯ ಸದಸ್ಯರಾದ ಶಾರದಾ ರಾಠೋಡ, ಹನಮಂತ ವಡ್ಡರ,ಶೈನಾಜ ಕದಡಿ, ಹನಮಂತ ಗವಾಣಿ, ಮುನಾಫ್ ದುಂಡಶಿ, ಮುಂಡಗೋಡ ಡಿಪೋ ವ್ಯವಸ್ಥಾಪಕ ಕರೀಮ ಕುರ್ತಕೋಟಿ ಚಾಲಕರು ನಿರ್ವಾಹಕರು ಸೇರಿದಂತೆ ಸಾರ್ವಜನಿಕರಾದ ಮಂಜುನಾಥ ವಡ್ಡರ ಅಪ್ಪಣ್ಣ ಕಲಾಲ ಮುಂತಾದವರು ಇದ್ದರು ಪ್ರತಿದಿನ ಮುಂಜಾನೆ 7.45 ಗಂಟೆಗೆ ಮುಂಡಗೋಡದಿಂದ ಹೊರಡುವ ಈ ಬಸ್, ಕೋಣನಕೇರಿ, ಚಂದಾಪುರ, ಬಂಕಾಪುರ ಹಾವೇರಿ, ರಾಣೇಬೆನ್ನೂರ ,ಮರ್ಗವಾಗಿ ಸಂಚರಿಸಿ ಸಾಯಂಕಾಲ 5 ಗಂಟೆಗೆ ಬೆಂಗಳೂರನ್ನು ತಲುಪಲಿದೆ., ಇದೇ ಬಸ್ ಮರು
ದಿನ ಮುಂಜಾನೆ 6 ಗಂಟೆಗೆ ಬೆಂಗಳೂರಿನಿಂದ ಹೊರಟು, ಸಾಯಂಕಾಲ 5 ಗಂಟೆಗೆ ಮುಂಡಗೋಡ ಬಸ್ ನಿಲ್ದಾಣಕ್ಕೆ ಆಗಮಿಸಲಿದೆ. ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಈ ನೂತನ ಬಸ್ ಸೇವೆಯನ್ನು ಕಲ್ಪಿಸಿದ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರಿಗೆ ಶಾಸಕರಾದ ಶಿವರಾಮ ಹೆಬ್ಬಾರ್ ಅಭಿನಂದನೆಗಳನ್ನು ನೀಡಿದ ಸಂದೇಸದಲ್ಲಿ ತಿಳಿಸಿದ್ದಾರೆ. ಇದಲ್ಲದೆ, ಬೆಂಗಳೂರಿಗೆ ಸಂಚರಿಸುವ ಪ್ರಯಾಣಿಕರು ಈ ನೂತನ ಬಸ್ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 