ಪಶ್ಚಿಮ ಸೌದಿ ಅರೇಬಿಯಾದಲ್ಲಿ ಬಸ್ ಅಪಘಾತ : ಕನಿಷ್ಠ 35 ಸಾವು

 ರಿಯಾದ್, ಅ 17:      ಪಶ್ಚಿಮ ಸೌದಿ ಅರೇಬಿಯಾದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ ಬಸ್ ಅಪಘಾತದಲ್ಲಿ ಕನಿಷ್ಠ 35 ಜನರು ಮೃತಪಟ್ಟಿದ್ದು ನಾಲ್ವರು ಗಾಯಗೊಂಡಿದ್ದಾರೆ. ಮೆದಿನಾ ಪ್ರಾಂತ್ಯದಲ್ಲಿ ಭಾರಿ ವಾಹನಕ್ಕೆ ಬಸ್ ಗುದ್ದಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆ ವರದಿ ಮಾಡಿದೆ.  ಈ ಬಸ್ ನಲ್ಲಿ ಅನೇಕ ಅರಬ್ ಮತ್ತು ಏಷ್ಯಾ ದೇಶದ ನಾಗರಿಕರಿದ್ದರು ಎಂದು ಹೇಳಲಾಗಿದೆ.