ಮದಿನ ಬಳಿ ಬಸ್ ಅಪಘಾತ: 35 ಪ್ರಯಾಣಿಕರ ದಾರುಣ ಸಾವು

ರಿಯಾದ್: ಅ 17:     ಬಸ್ಸೊಂದು ಭಾರಿ  ಗಾತ್ರದ ಯಂತ್ರವೊಂದಕ್ಕೆ ಬಲವಾಗಿ ಅಪ್ಪಳಿಸಿದ ಪರಿಣಾಮ  35 ವಿದೇಶಿಗರು ಸ್ಥಳದಲ್ಲೇ ಸಾವನ್ನಪ್ಪಿ ನಾಲ್ವರು ಗಂಭೀರ ಗಾಯಗೊಂಡ ಘಟನೆ ಪಶ್ಚಿಮ ಸೌದಿ ಅರೇಬಿಯಾದಲ್ಲಿ ವರದಿಯಾಗಿದೆ.  

ಖಾಸಗಿ  ಬಸ್ಸು ಮತ್ತು ಭಾರೀ ವಾಹನದ ನಡುವೆ ಮದಿನಾ ಪ್ರದೇಶದ ಅಲ್ ಅಕಲ್ ಕೇಂದ್ರದ ಬಳಿ ಅಪಘಾತ ಸಂಭವಿಸಿತ್ತು. ಪ್ರಯಾಣಿಕರೆಲ್ಲರೂ ಮುಸ್ಲಿಂರ ಪವಿತ್ರ ನಗರ ಮದಿನಾಕ್ಕೆ ಧಾರ್ಮಿಕ ಪ್ರವಾಸ ಕೈಗೊಂಡಿದ್ದಾಗ ಈ ಕಹಿ ಘಟನೆ ಜರುಗಿದೆ. ಬಸ್ ನಲ್ಲಿದ್ದವರ ಪೈಕಿ  ಅರಬ್ ಮತ್ತು ಏಷ್ಯನ್ ರಾಷ್ಟಗಳ  ಪ್ರಯಾಣಿರೇ ಹೆಚ್ಚಾಗಿದ್ದರು ಎಂದು ಹೇಳಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಅಪಘಾತದಲ್ಲಿ ಮೃತಪಟ್ಟವರಲ್ಲಿ ಯಾರಾದರೂ ಭಾರತೀಯರು ಇದ್ದಾರೆಯೇ ಎಂಬ  ಬಗ್ಗೆ ಸೌದಿ ಅರೇಬಿಯಾದಲ್ಲಿರುವ ಇಂಡಿಯಾ ಮಿಷನ್ ಖಚಿತಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.